Mysore
29
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಧ್ರುವ ಸರ್ಜಾ ಜೊತೆ ನಟಿಸಿದ್ದ ಬಾಡಿ ಬಿಲ್ಡರ್ “ಜೋ ಲಿಂಡ್ಕರ್ 30ನೇ ವಯಸ್ಸಿಗೆ ನಿಧನ

ಬೆಂಗಳೂರು: ನಟ ಧ್ರುವ ಸರ್ಜಾ ನಾಯಕರಾಗಿದ್ದ ‘ಪೊಗರು’ ಸಿನಿಮಾದಲ್ಲಿ ನಟಿಸಿದ್ದ, ಬಾಡಿ ಬಿಲ್ಡಿಂಗ್‌ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ ಜೋ ಲಿಂಡ್ಕರ್ ನಿಧನರಾಗಿದ್ದಾರೆ.

ಫಿಟ್‌ನೆಸ್ ಬಗ್ಗೆ ಕಾಳಜಿ ಹೊಂದಿದ್ದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದ ಜೋ ಲಿಂಡ್ಕರ್ ಕಿರಿಯ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.

ಜೋ ಲಿಂಡರ್ ನಿಧನಕ್ಕೆ ಧ್ರುವ ಸರ್ಜಾ ಸಂತಾಪ ಸೂಚಿಸಿದ್ದಾರೆ. ‘ಪೊಗರು’ ಚಿತ್ರದ‌ ಕ್ರೈಮ್ಯಾಕ್ಸ್‌ ದೃಶ್ಯದಲ್ಲಿ ಜೋ ಲಿಂಡ್ಕರ್ ಕಾಣಿಸಿಕೊಂಡಿದ್ದರು. ಇದರಲ್ಲಿ ಧ್ರುವ ಸರ್ಜಾ ಹಾಗೂ ಜೋ ಲಿಂಡ್ಕ‌ರ್ ಫೈಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಲಿಂಡ್ಕ‌ ನಿಧನದ ಬಗ್ಗೆ ದಿಗ್ಧಮೆ ವ್ಯಕ್ತಪಡಿಸಿ ಧ್ರುವ ಸರ್ಜಾ ಸಂತಾಪ ಸೂಚಿಸಿದ್ದಾರೆ. ಲಿಂಡ್ನರ್ ನಿಧನದ ಬಗ್ಗೆ ಗೆಳತಿ ನಿಚಾ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ‌ ಹಂಚಿಕೊಂಡಿದ್ದಾರೆ.

ಏಕಾಏಕಿ ರಕ್ತನಾಳಗಳ ಸಮಸ್ಯೆಯಿಂದಾಗಿ ಲಿಂಡರ್ ನಿಧನರಾದರು ಎಂದು ಹೇಳಿದ್ದಾರೆ.

ಲಿಂಡ್ಕರ್ ಅವರು ಜರ್ಮನ್ ಮೂಲದವರು, ಸದ್ಯ ಅವರು ಗೆಳತಿ ವಿಚಾ ಜೊತೆಯಲ್ಲಿ ಥೈಲ್ಯಾಂಡ್‌ನಲ್ಲಿ ವಾಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!