Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

BIGG BOSS ಕನ್ನಡ: ಕ್ಯಾಪ್ಟನ್‌ ನೀತು ಮನೆಯಿಂದ ಔಟ್‌!

ಕನ್ನಡ ಕಿರುತೆರೆಯ ಬಿಗ್‌ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 10 ರಲ್ಲಿ ಇಂದೆಂದೂ ನಡೆಯದ ಹೊಸ ಇತಿಹಾಸ ದಾಖಲಗಿದೆ. ಮೊಟ್ಟ ಮೊದಲ ಬಾರಿ ಬಿಗ್‌ ಮನೆಯ ಕ್ಯಾಪ್ಟನ್‌ ಮನೆಯಿಂದ ಹೊರ ಹೋಗಿದ್ದಾರೆ. ಕ್ಯಾಪ್ಟನ್ ಆಗಿದ್ದೋರು ನಾಮಿನೇಷನ್‌ನಿಂದ ಬಚಾವ್ ಆಗಬೋದು. ಆದರೆ ಎಲಿಮಿನೇಷನ್‌ನಿಂದ ಅಲ್ಲ ಅನ್ನೋದು ಈ ವಾರದ ಎಲಿಮಿನೇಷನ್‌ನಿಂದ ಸಾಬೀತಾಗಿದೆ.

ಮನೆಯ ಕ್ಯಾಪ್ಟನ್ ನೀತು ವನಜಾಕ್ಷಿ ಅವರಿಗೆ ವೀಕ್ಷಕರಿಂದ ಕಡಿಮೆ ವೊಟ್‌ ಸಿಕ್ಕಿದ್ದರಿಂದ ಅವರೀಗ ‘ಬಿಗ್ ಬಾಸ್’ ಮನೆಯಿಂದ ಹೊರಬಿದ್ದಿದ್ದಾರೆ!. ಇದು ಒಬ್ಬ ಕ್ಯಾಪ್ಟನ್‌ ಮನೆಯಿಂದ ಹೊರ ಹೋಗಿದ್ದು ಇದೇ ಮೊದಲು.

ನಾಮಿನೇಟ್ ಆಗಿದ್ದವರು ಯಾರು? : ಕಳೆದ ವಾರ ಕ್ಯಾಪ್ಟನ್ ಆಗಿದ್ದ ಕಾರ್ತಿಕ್ ಮಹೇಶ್ ನಾಮಿನೇಟ್ ಆಗಿರಲಿಲ್ಲ. ಹಾಗೆಯೇ, ಅವರು ಮೈಕಲ್‌ ಅವರನ್ನು ನಾಮಿನೇಷನ್‌ನಿಂದ ಬಚಾವ್ ಮಾಡಿದ್ದರು. ಇನ್ನು, ತುಕಾಲಿ ಸಂತು ಕೂಡ ತಮಗಿದ್ದ ಒಂದು ವಿಶೇಷ ಅಧಿಕಾರದಿಂದ ವರ್ತೂರು ಸಂತೋಷ್ ಅವರನ್ನು ನಾಮಿನೇಷನ್‌ನಿಂದ ಸೇಫ್ ಮಾಡಿದ್ದರು. ಕೊನೆಗೆ ನೀತು ವನಜಾಕ್ಷಿ, ವಿನಯ್, ತುಕಾಲಿ ಸಂತು, ಸಂಗೀತಾ, ತನಿಷಾ, ನಮ್ರತಾ, ಸ್ನೇಹಿತ್, ಸಿರಿ, ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದರು.

ಶನಿವಾರದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್‌, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ವಿನಯ್ ಗೌಡ ಅವರನ್ನು ನಾಮಿನೇಷನ್‌ನಿಂದ ಸುದೀಪ್ ಸೇಫ್‌ ಮಾಡಿದ್ದರು. ಭಾನುವಾರದ (ನ.26) ಸಂಚಿಕೆಯಲ್ಲಿ ನಮ್ರತಾ ಗೌಡ, ‘ತುಕಾಲಿ’ ಸಂತು, ಸ್ನೇಹಿತ್ ಅವರು ಸೇಫ್ ಆದರು. ಅಂತಿಮವಾಗಿ ಸಿರಿ ಮತ್ತು ನೀತು ಅವರು ಎಲಿಮಿನೇಷನಲ್ಲಿ ಉಳಿದುಕೊಂಡರು. ‘ಕಿಚ್ಚ’ ಸುದೀಪ್ ಅವರು ನೀತು ಹೆಸರು ಹೇಳುವ ಮೂಲಕ, ಅವರ ಆಟ 50 ದಿನಗಳಿಗೆ ಅಂತ್ಯವಾಗಿ ಎಂಬುದನ್ನು ಘೋಷಿಸಿದರು.

ಏನಂದ್ರು ನೀತು?
ಟ್ರಾನ್ಸ್‌ಜೆಂಡರ್‌ ಸಮುದಾಯದಿಂದ ಬಂದಿರುವ ನೀತು, “ಕನ್ವರ್ಟ್‌ ಆಗುವ ಮೊದಲು ನನ್ನ ಬದುಕು ನರಕವೇ ಆಗಿತ್ತು. ಹೆಣ್ಣಾಗಿ ಫೀಲ್ ಮಾಡ್ತಿದ್ದೆ. ಹೊರಗಡೆ ಹುಡುಗನಾಗಿ ಕಾಣಿಸ್ತಿದ್ದೆ. ಅದು ನನಗೆ ಆ ರೀತಿ ಅನ್ನಿಸುತ್ತಿರಲಿಲ್ಲ. ಯಾವಾಗ ನನ್ನ ತಾಯಿ ನನ್ನನ್ನು ಒಪ್ಪಿಕೊಂಡರೋ ಆಗ ನನ್ನ ಹೊಸ ಜೀವನ ಶುರುವಾಯ್ತು. ಈಗ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡ್ತಿದ್ದೀನಿ. ಇಲ್ಲಿಯೂ ಪ್ರತಿಕ್ಷಣ ಎಂಜಾಯ್ ಮಾಡಿದ್ದೀನಿ. ಎಲ್ಲರಿಂದಲೂ ಪ್ರೀತಿ ಸಿಕ್ಕಿದೆ.. ಟ್ರಾನ್ಸ್‌ಜೆಂಡರ್‍ ಆಗಿರುವ ನನಗೆ ಈ ವೇದಿಕೆ ಕೊಟ್ಟಿದ್ದಕ್ಕೆ ಧನ್ಯವಾದ. ಎಲ್ಲರ ಪ್ರೀತಿ ನನಗೆ ನೂರಕ್ಕೆ ನೂರು ಸಿಕ್ಕಿದೆ. ಆ ಪ್ರೀತಿಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಖಷಿಯಿದೆ. ಎಲ್ಲರಿಂದಲೂ ಒಂದೊಂದು ವಿಷಯ ಕಲಿತಿದ್ದೀನಿ. ಇಲ್ಲಿನ ಒಂದೊಂದು ಕ್ಷಣವನ್ನೂ ನಾನು ಸೆಲೆಬ್ರೇಟ್ ಮಾಡಿದ್ದೀನಿ’ ಎಂದು ಹೇಳಿದ್ದಾರೆ.

ಸದ್ಯ ಮನೆಯಲ್ಲಿ ನೀತು ಕ್ಯಾಪ್ಟನ್ ಆಗಿದ್ದರು. ಅವರೀಗ ಎಲಿಮಿನೇಟ್ ಆಗಿರುವುದರಿಂದ ಮನೆಯಿಂದ ಹೊರಹೋಗುವ ಮುನ್ನ ಕ್ಯಾಪ್ಟನ್‌ನ ಜವಾಬ್ದಾರಿಯನ್ನು ಒಬ್ಬರಿಗೆ ನೇಮಿಸುವಂತೆ ನೀತುಗೆ ‘ಬಿಗ್‌ ಬಾಸ್’ ಆದೇಶಿಸಿದರು. ಅದಕ್ಕೆ ಮೈಕಲ್ ಅವರನ್ನು ಮನೆಯ ಕ್ಯಾಪ್ಟನ್ ಆಗಿ ನೇಮಿಸಿ ನೀತು ಹೊರಬಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ