ಕಳೆದ ಶುಕ್ರವಾರ ( ನವೆಂಬರ್ 24 ) ಅಭಿಷೇಕ್ ಅಂಬರೀಶ್ ಹಾಗೂ ನಿರ್ದೇಶಕ ಸೂರಿ ಕಾಂಬಿನೇಷನ್ ನ ಬ್ಯಾಡ್ ಮ್ಯಾನರ್ಸ್ ಚಿತ್ರ ಬಿಡುಗಡೆಯಾಗಿದೆ.
ರುದ್ರ ಎಂಬ ರಗಡ್ ಪೊಲೀಸ್ ಪಾತ್ರವನ್ನು ಅಭಿಷೇಕ್ ಅಂಬರೀಶ್ ತಮ್ಮ ಚೊಚ್ಚಲ ಚಿತ್ರ ಅಮರ್ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಮಾಸ್ ಚಿತ್ರದಲ್ಲಿ ನಟಿಸುವ ಮೂಲಕ ಪ್ರಯೋಗಕ್ಕೆ ಕೈಹಾಕಿದ್ದಾರೆ.
ನಿರ್ದೇಶಕ ಸೂರಿ ತಮ್ಮ ಕಥೆ ಹೇಳುವ ವಿಭಿನ್ನ ಶೈಲಿಯನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಕಥಾನಾಯಕ ಗನ್ ಮಾಫಿಯಾ ವಿರುದ್ಧ ಹೇಗೆ ಹೋರಾಡುತ್ತಾನೆ ಎಂಬುದನ್ನು ತಮ್ಮ ಏರಿಳಿತದ ಸ್ಕ್ರೀನ್ ಪ್ಲೇ ಮೂಲಕ ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆ.

ಆದರೆ ಚಿತ್ರ ಸಂಪೂರ್ಣವಾಗಿ ಸಕ್ಸಸ್ ರಿಪೋರ್ಟ್ ಪಡೆದುಕೊಂಡಿಲ್ಲ. ಚಿತ್ರ ನೋಡಿದ ಸಿನಿ ರಸಿಕರು ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಚಿತ್ರತಂಡ ಮಾತ್ರ ಚಿತ್ರ ಮೊದಲ ವಾರಾಂತ್ಯಕ್ಕೆ 6.4 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಪೋಸ್ಟರ್ ಹಂಚಿಕೊಂಡಿದೆ. ಚಿತ್ರಕ್ಕೆ ಯಾವ ರೀತಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತೋ ಅದೇ ರೀತಿ ಈ ಕಲೆಕ್ಷನ್ ಬಗ್ಗೆ ಸಹ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.





