Mysore
20
overcast clouds
Light
Dark

ಕಾಟೇರ ಸಕ್ಸಸ್‌ ಪಾರ್ಟಿಯಲ್ಲಿ ಎಡವಟ್ಟು: ನಟ ದರ್ಶನ್‌ ಸೇರಿ 8 ಮಂದಿಗೆ ನೋಟಿಸ್‌

ಬೆಂಗಳೂರು : ಸಿನಿಮಾ ಸಕ್ಸಸ್‌ ಪಾರ್ಟಿಯು ಅವಧಿ ಮೀರಿ ಬೆಳಗಿನ ಜಾವದ ವರೆಗೆ ನಡಸಲಾಗಿದೆ ಎಂಬ ಆರೋಪದ ಮೇಲೆ ನಟ ದರ್ಶನ್‌ ಸಹಿತ ೮ ಮಂದಿಗೆ ಮತ್ತು ಕರ್ತವ್ಯಲೋಪ ಎಸಗಿದ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆ ಪೊಲೀಸರ ಮೇಲೆ ಬೆಂಗಳೂರು ಪೊಲೀಸ್‌ ಇಲಾಖೆ ತನಿಖೆಗೆ ಆದೇಶ ನೀಡಿದೆ.

ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್‌, ಸಿನಿಮಾ ಸಕ್ಸಸ್‌ ಪಾರ್ಟಿಯ ತಿನಿಖೆಗೆ ಆದೇಶ ಹೊರಡಿಸಿರುವ ನೋಟಿಸ್‌ ಪ್ರತಿಯನ್ನು ತೋರಿಸಿದರು. ಜೊತೆಗೆ ಚಿತ್ರತಂಡದ ವಿರುದ್ಧ ನೀಡಲಾಗಿರುವ ನೊಟೀಸ್‌ ಬಗ್ಗೆ ತನಿಖೆ ನಡೆಸುವಂತೆ ಮಲ್ಲೇಶ್ವರಂ ಎಸಿಪಿ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಜನವರಿ 3ರಂದು ರಾತ್ರಿಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌, ಸಬ್ ಇನ್ಸ್‌ಪೆಕ್ಟರ್ ಮತ್ತು ನಾಲ್ವರು ಕಾನ್ ಸ್ಟೇಬಲ್‌ಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ಎಫ್‌ಐಆರ್‌ನಲ್ಲೇನಿದೆ?
ಅಬಕಾರಿ ಕಾಯ್ದೆ ಪ್ರಕಾರ ರೆಸ್ಟೋರೆಂಟ್‌ ತೆರೆಯಲು ಬೆಳಿಗ್ಗೆ ೧೦ ರಿಂದ ರಾತ್ರಿ ೧ ವರೆಗೆ ಅವಕಾಶ ಇದೆ. ಆದರೆ ಜಟ್ಲಾಗ್‌ ರೆಸ್ಟೋಬಾರ್‌ ಈ ನಿಯಮ ಉಲ್ಲಂಘಿಸಿ ಬೆಳಗಿನ ಜಾವ ೩.೩೦ ವರೆಗೆ ಸೆಲೆಬ್ರೆಟಿಗಳಿಗೆ ಪಾರ್ಟಿ ಮಾಡಲು ಅವಕಾಶ ನೀಡಲಾಗಿತ್ತು. ಇದನ್ನು ಮನಗಂಡ ಸ್ಥಳೀಯರು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ರೆಸ್ಟೋಬಾರ್‌ ಮೇಲೆ ದಾಳಿ ನಡೆಸಿ, ಸೆಲೆಬ್ರೆಟಿಸ್‌ರನ್ನು ಮನೆಗೆ ಕಳುಹಿಸಿ ಬಾರ್‌ ಮುಚ್ಚಿಸಿದ್ದರು.

ಇನ್ನೂ ಬೆಳಗಿನ ಜಾವದ ವರೆಗೆ ಪಾರ್ಟಿ ಹೇಗೆ ನಡೆಯಿತು. ಈ ಬಗ್ಗೆ ವಿವಿರಗಳನ್ನು ಒದಗಿಸುವಂತೆ ಸ್ಥಳೀಯ ಪೊಲೀಸರಿಗೆ ಕೇಳಲಾಗಿದೆ. ಮತ್ತು ಬಾರ್‌ ಅವಧಿ ಮೀರಿ ಕಾರ್ಯನಿರ್ವಹಿಸಲು ಹೇಗೆ ಅವಕಾಶ ನೀಡಲಾಯಿತು ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದಯ ಡಿಸಿಪಿ ಸೈದುಲ್‌ ಮಾಹಿತಿ ನೀಡಿದ್ದಾರೆ.

೨೦೨೩ರ ವರ್ಷಾಂತ್ಯದಲ್ಲಿ ತೆರೆಕಂಡ ನಟ ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾ ತೆರೆಕಂಡು ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸಿನಿಮಾ ಸಕ್ಸಸ್‌ ಹಿನ್ನಲೆ ತಂಡ ಈ ಸಕ್ಸಸ್ ಪಾರ್ಟಿ ಆಯೋಜಿಸಿತ್ತು. ಪಾರ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟರಾದ ಧನಂಜಯ್, ಅಭಿಷೇಕ್ ಅಂಬರೀಶ್ ಮತ್ತು ಇತರ ತಾರಾ ಬಳಗ ಈ ಪಾರ್ಟಿಯಲ್ಲಿತ್ತು.

https://x.com/sharadasrinidhi/status/1742781985872134177?s=20

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ