ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ಅನಿರುದ್ಧ್ ಮತ್ತು ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಹೊಸ ಧಾರಾವಾಹಿ ‘ ಸೂರ್ಯವಂಶ’ಕ್ಕೆ ಒಂದಾಗಿದ್ದಾರೆ. ಇಬ್ಬರೂ ಡೆಡ್ಲಿ ಕಾಂಬಿನೇಷನ್ ಎಂದೇಳುತ್ತಿರುವ ನೆಟ್ಟಿಗರು ನಿರೀಕ್ಷೆ ಹೆಚ್ಚಿಗೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಷಯವನ್ನು ಅನಿರುಧ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್ ನಾರಾಯಣ್ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತದೆ ಅನ್ನೋ ಭರವಸೆ ನನಗಿದೆ’ ಎಂದು ಅನಿರುದ್ಧ ಬರೆದುಕೊಂಡಿದ್ದಾರೆ.
ನೇರಳೆ ಬಣ್ಣದ ಸೂಟ್‌ನಲ್ಲಿ ಅನಿರುದ್ಧ್ ಕಾಣಿಸಿಕೊಂಡರೆ, ವೈಟ್ ಆಂಡ್ ವೈಟ್ ಪಂಚೆಯಲ್ಲಿ ಎಸ್ ನಾರಾಯಣ್ ಕಾಣಿಸಿಕೊಂಡಿದ್ದಾರೆ. ಎರಡು ಡೆಡ್ಲಿ ಕಾಂಬಿನೇಷನ್ ಡಿಫರೆಂಟ್ ಲುಕ್‌ಗಳು ಕಥೆ ಏನೆಂದು ಗೆಸ್ ಮಾಡುವುದರಲ್ಲಿ ಅಭಿಮಾನಿಗಳು ಬ್ಯುಸಿಯಾಗಿದ್ದಾರೆ.





