Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಅತಿಹೆಚ್ಚು ಗಳಿಕೆ ಮಾಡಿದ ಭಾರತದ ʼಎʼ ಸರ್ಟಿಫೈಡ್‌ ಚಿತ್ರ ಎಂಬ ದಾಖಲೆ ಬರೆದ ಅನಿಮಲ್!‌

ಕಳೆದ ವಾರವಷ್ಟೇ ತೆಲುಗು ನಿರ್ದೇಶಕ ಸಂದೀಪ್‌ ರೆಡ್ಡಿ ವಾಂಗ ನಿರ್ದೇಶನದ ಬಾಲಿವುಡ್‌ ಚಿತ್ರ ಅನಿಮಲ್‌ ತೆರೆಗೆ ಬಂದಿದೆ. ಬಿಡುಗಡೆಗೂ ಮುನ್ನ ತನ್ನ ಟ್ರೈಲರ್‌ ಹಾಗೂ ಪೋಸ್ಟರ್‌ಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಅನಿಮಲ್‌ ಬಿಡುಗಡೆ ನಂತರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಬಿಡುಗಡೆ ದಿನ ಹೆಚ್ಚು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಸಾಧಾರಣ ಯಶಸ್ಸು ಗಳಿಸಬಹುದು ಎನಿಸಿಕೊಂಡಿದ್ದ ಅನಿಮಲ್‌ ಸಿನಿಮಾ ನಿರೀಕ್ಷೆಗೂ ಮೀರಿ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಸದ್ಯ ನಿನ್ನೆಗೆ ( ಡಿಸೆಂಬರ್‌ 5 ) 5 ದಿನಗಳ ಓಟವನ್ನು ಪೂರೈಸಿರುವ ಅನಿಮಲ್‌ ಚಿತ್ರ ವಿಶ್ವ ಬಾಕ್ಸ್‌ ಆಫೀಸ್‌ನಲ್ಲಿ 481 ಕೋಟಿ ರೂಪಾಯಿ ಗ್ರಾಸ್‌ ಕಲೆಕ್ಷನ್‌ ಅನ್ನು ಮಾಡಿದೆ. ಅಲ್ಲದೇ ಭಾರತ ಬಾಕ್ಸ್‌ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಎ ಸರ್ಟಿಫೈಡ್‌ ಚಿತ್ರ ಎಂಬ ದಾಖಲೆಯನ್ನೂ ಸಹ ಅನಿಮಲ್‌ ನಿರ್ಮಿಸಿದೆ.

ಭಾರತದಲ್ಲಿ ಅತಿಹೆಚ್ಚು ಗಳಿಸಿದ ಎ ಸರ್ಟಿಫೈಡ್‌ ಚಿತ್ರಗಳ ಟಾಪ್‌ 5 ಪಟ್ಟಿ:
1. ಅನಿಮಲ್‌ – 284.05 ಕೋಟಿ ( 5 ದಿನಗಳಲ್ಲಿ )
2. ಕಬೀರ್ ಸಿಂಗ್‌ – 278 ಕೋಟಿ
3. ದ ಕಾಶ್ಮೀರ್‌ ಫೈಲ್ಸ್‌ – 252 ಕೋಟಿ
4. ದ ಕೇರಳ ಸ್ಟೋರಿ – 242 ಕೋಟಿ
5. ಓ ಮೈ ಗಾಡ್‌ 2 – 150 ಕೋಟಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!