ಪ್ರಭಾಸ್ ನಟನೆಯ ಆದಿಪುರುಷ್ ರಿಲೀಸ್ ವೇಳೆಯೇ ಅಮೆರಿಕಾಗೆ ತೆರಳಿದ್ದರು. ಕಾಲಿನ ಶಸ್ತ್ರಚಿಕಿತ್ಸೆಗಾಗಿ 50 ದಿನಗಳ ಕಾಲ ಚಿಕಿತ್ಸೆ ಪಡೆದು ಈಗ ಭಾರತಕ್ಕೆ ಬಂದಿದ್ದಾರೆ. ಹಾಗಾಗಿ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಸಿನಿಮಾದ ಶೂಟಿಂಗ್‌ಗೆ ಪ್ರಭಾಸ್ ಭಾಗಿಯಾಗಿದ್ದಾರೆ.
ಪಠಾಣ್ ಬೆಡಗಿ ದೀಪಿಕಾ ಪಡುಕೋಣೆ ಜೊತೆ ಪ್ರಾಜೆಕ್ಟ್ ಕೆ ಸಿನಿಮಾಗೆ ಪ್ರಭಾಸ್ ಕೈಜೋಡಿಸಿದ್ದಾರೆ. ಪ್ರಾಜೆಕ್ಟ್ ಕೆ ಹೆಸರಿನಲ್ಲಿ ಲಾಂಚ್ ಆಗಿದ್ದ ಈ ಚಿತ್ರ ಈಗ ಕಲ್ಕಿ 2898 AD ಎಂದು ಟೈಟಲ್ ಬದಲಾಗಿಸಲಾಗಿದೆ. ಪ್ರಭಾಸ್ ಅನಾರೋಗ್ಯದ ನಿಮಿತ್ತ ಶೂಟಿಂಗ್‌ಗೆ ಬ್ರೇಕ್ ಬಿದ್ದಿತ್ತು. ಈಗ ಹೈದರಾಬಾದ್‌ನ ರಾಮೋಜಿ ಫಿಲ್ಮ್ಂ ಸಿಟಿಯಲ್ಲಿ ಶೂಟಿಂಗ್ ಶುರುವಾಗಿದೆ. ಆಗಸ್ಟ್ 28ರವರೆಗೆ ಶೂಟಿಂಗ್ ನಡೆಯಲಿದೆ.
ನಾಯಕಿಯಾಗಿ ನಟಿಸಿದ್ದಾರೆ. ಕಮಲ್ ಹಾಸನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಬಿಗ್ ಬಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಪ್ರಭಾಸ್ ಕಲ್ಕಿಯ ಕಥೆ ಭಿನ್ನವಾಗಿ ಇರಲಿದೆ ಎನ್ನಲಾಗುತ್ತಿದೆ. ಕಲ್ಕಿ ಜನಿಸಿದ ಬಳಿಕ ಕಲಿಯುಗ ಅಂತ್ಯವಾಗಿ ಸತ್ಯಯುಗ ಆರಂಭ ಆಗುತ್ತದೆ ಎನ್ನುವ ನಂಬಿಕೆ ಅನೇಕರದ್ದು. ಹೀಗಾಗಿ ಸಿನಿಮಾದ ಕಥೆ ಕಲಿಯುಗದ ಅಂತ್ಯವನ್ನು ತೋರಿಸುವ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಮೊದಲ ತುಣುಕು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.





