ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಜೈಲು ಸೇರಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಶಿವರಾಜಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಮೊದಲ ಬಾರಿಗೆ ಈ ವಿಚಾರವಾಗಿ ರಿಯಾಕ್ಟ್ ಮಾಡಿದ ಅವರು, ಏನು ಮಾಡೋಕ್ಕೆ ಆಗಲ್ಲ ಹಣೆ ಬರಹ ಅಂತ ಬಂದಾಗ ನಾವು ಏನೇ ಮಾತನಾಡೋಕೆ ಹೋದರು ತಪ್ಪಾಗುತ್ತದೆ. ಈ ಘಟನೆಯ ಬಗ್ಗೆ ಬೇಸರ ಆಗುತ್ತದೆ. ಹಣೆ ಬರಹದಲ್ಲಿ ಏನು ಇದೆ ಅದೇ ಆಗುತ್ತದೆ. ಈ ಘಟನೆಯಿಂದ ರೇಣುಕಾಸ್ವಾಮಿ ಮತ್ತು ದರ್ಶನ್ ಫ್ಯಾಮಿಲಿಗೂ ನೋವಾಗಿರುತ್ತದೆ, ನಾವು ಎಂದಿಗೂ ನ್ಯಾಯಕ್ಕೆ ತಲೆ ಬಾಗಲೇಬೇಕು ಎಂದರು.



