Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನಟ ರವಿ ಕಿಶನ್ ಪುತ್ರಿ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಸೇರ್ಪಡೆ

ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟ, ‘ಹೆಬ್ಬುಲಿ’ ಚಿತ್ರದ ವಿಲನ್ ಖ್ಯಾತಿಯ ನಟ ರವಿ ಕಿಶನ್ ಪುತ್ರಿ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆ ಸೇರಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿ ಮಕ್ಕಳು ಚಿತ್ರರಂಗದಲ್ಲೇ ಮುಂದುವರೆಯಲು ಇಷ್ಟಪಡುತ್ತಾರೆ. ಪಾಲಕರ ಹೆಸರಲ್ಲಿ ಸಿನಿಮಾ ರಂಗಕ್ಕೆ ಬಂದು ಒಂದಷ್ಟು ಸಿನಿಮಾ ಮಾಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ದ ಎಂಬಂತೆ ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ಮೂಲಕ ನಟ ರವಿ ಕಿಶನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈಗ ಅವರ ಮಗಳು ಸೇನೆ ಸೇರಿದ್ದಾರೆ.

ನಟ, ಸಂಸದ ರವಿ ಕಿಶನ್ ಮಗಳು ಇಶಿತಾ ಶುಕ್ಲಾ ಭಾರತೀಯ ಸೇನೆ ಸೇರಿದ್ದಾರೆ. ಈ ಮೂಲಕ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ರವಿ ಕಿಶನ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ‘ದೇಶ ಸೇವೆ ಮಾಡುವ ಅವಕಾಶ ಇಶಿತಾಗೆ ಸಿಕ್ಕಿದೆ. ತಮ್ಮ ಪುತ್ರಿಯ ಸಾಧನೆ ಬಗ್ಗೆ ತಮಗೆ ಅತೀವ ಹೆಮ್ಮೆ ಇದೆ.. ಆಕೆಯ ಭವಿಷ್ಯ ಉಜ್ವಲವಾಗಿರಲಿ ಎಂದು ರವಿ ಕಿಶನ್ ಆಶಿಸಿದ್ದಾರೆ.

ಅಂದಹಾಗೆ ರವಿ ಕಿಶನ್ ಪುತ್ರಿ ಇಶಿತಾಗೆ ಈಗ ಕೇವಲ 21 ವರ್ಷ. 1993ರಲ್ಲಿ ಪ್ರೀತಿ ಎಂಬುವರ ಜೊತೆ ರವಿ ಕಿಶನ್ ಮದುವೆಯಾದರು. ಒಬ್ಬ ಮಗ ಮತ್ತು ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಅದರಲ್ಲಿ ರಿವಾ ಕಿಶನ್ ಶುಕ್ಲಾ ಎಂಬ ಪುತ್ರಿ 2020ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ‘ಸಬ್ ಕುಶಲ್ ಮಂಗಲ್’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಎಲ್ಲರೂ ಇಶಿತಾ ಹಾಗೂ ರವಿ ಕಿಶನ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ವಿಚಾರದಲ್ಲಿ ಕುಟುಂಬ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ ಎಂದು ಅನೇಕರು ಹೇಳಿದ್ದಾರೆ

ಬಾಲಿವುಡ್ ನಟ ರವಿ ಕಿಶನ್ ಅವರು ಕನ್ನಡದ ‘ಹೆಬ್ಬುಲಿ’ ಚಿತ್ರದಲ್ಲಿ ಸುದೀಪ್ ಮುಂದೆ ಅಬ್ಬರಿಸಿ ಗಮನ ಸೆಳೆದಿದ್ದರು. ದ್ರೋಣ, ಶಿವಾರ್ಜುನ, ರಾಬರ್ಟ್ ಚಿತ್ರದಲ್ಲಿಯೂ ರವಿ ಕಿಶನ್ ನಟಿಸಿದ್ದಾರೆ. ಹಿಂದಿ, ಭೋಜಪುರಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ರೇಸ್ ಗುರಂ’ ಚಿತ್ರದಲ್ಲಿ ಅವರು ಮಾಡಿದ ವಿಲನ್ ಪಾತ್ರ ಸಾಕಷ್ಟು ಗಮನ ಸಳೆಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಗೆದ್ದು ಸಂಸದರಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ