Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನಟ ಪ್ರೇಮ್‌ – ಡಿಕೆಶಿ ದಿಢೀರ್‌ ಭೇಟಿ; ಕಾಂಗ್ರೆಸ್‌ ಸೇರ್ತಾರಾ ನಟ?

ಸಿನಿಮಾ ನಟರು ಹಾಗೂ ನಟಿಯರು ಚಿತ್ರರಂಗದಲ್ಲಿ ಹೆಸರು ಮಾಡಿದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದು ಹಳೆಯ ವಾಡಿಕೆ. ಈ ಹಿಂದೆ ಕನ್ನಡ ಸೇರಿದಂತೆ ಇತರೆ ಭಾಷೆಗಳ ಕಲಾವಿದರು ರಾಜಕೀಯ ಸೇರಿದ ಹಲವಾರು ನಿದರ್ಶನಗಳಿವೆ. ಅಲ್ಲದೇ ಸಿನಿಮಾ ನಟ – ನಟಿಯರು ಮುಖ್ಯಮಂತ್ರಿಗಳಾಗಿ ಯಶಸ್ವಿ ರಾಜ್ಯಭಾರ ನಡೆಸಿದ್ದನ್ನು ನಾವು ನೀವೆಲ್ಲಾ ಕಂಡಿದ್ದೇವೆ.

ಇಂತಹ ಕಲಾವಿದರ ಸಾಲಿಗೆ ಇದೀಗ ಕನ್ನಡದ ಖ್ಯಾತ ನಟರಲ್ಲಿ ಓರ್ವರಾದ ನೆನಪಿರಲಿ ಪ್ರೇಮ್‌ ಸಹ ಸೇರ್ಪಡೆಗೊಳ್ತಾರಾ ಎಂಬ ಪ್ರಶ್ನೆ ಏಳುವಂತೆ ಮಾಡಿದೆ ಅವರು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಸುದ್ದಿ.

ಹೌದು, ನಟ ಪ್ರೇಮ್‌ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡುತ್ತಿರುವ ಫೋಟೊವನ್ನು ಸ್ವತಃ ಡಿಕೆಶಿ ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ( ನವೆಂಬರ್‌ 12 ) ಈ ಫೋಟೊ ಹಂಚಿಕೊಂಡಿರುವ ಡಿಕೆ ಶಿವಕುಮಾರ್‌ “ಖ್ಯಾತ ಚಿತ್ರನಟರಾದ ನೆನಪಿರಲಿ ಪ್ರೇಮ್ ರವರು ಇಂದು ನನ್ನನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ, ಶುಭ ಹಾರೈಸಿದರು” ಎಂದು ಬರೆದುಕೊಂಡಿದ್ದಾರೆ.

ಈ ಫೋಟೊ ಕಂಡ ನೆಟ್ಟಿಗರು ಪ್ರೇಮ್‌ ಏನಾದ್ರೂ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಳ್ತಾರಾ ಎಂಬ ಪ್ರಶ್ನೆಯನ್ನು ಕಾಮೆಂಟ್‌ ಮಾಡುವ ಮೂಲಕ ಎಸೆದಿದ್ದಾರೆ. ಇನ್ನು ಪ್ರೇಮ್‌ ಡಿಕೆ ಶಿವಕುಮಾರ್‌ ಅವರು ಮಾಡಿರುವ ಪೋಸ್ಟ್‌ನ ಸ್ಕ್ರೀನ್‌ಶಾಟ್‌ ಅನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ದೀಪಾವಳಿಯ ಶುಭಾಶಯಗಳು ಸರ್‌ ಎಂದು ಬರೆದುಕೊಳ್ಳುವ ಮೂಲಕ ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್ನು ಪ್ರೇಮ್‌ ಸದ್ಯ ಕೆಲ ಚಿತ್ರಗಳಲಿ ಬ್ಯುಸಿ ಇದ್ದು, ಪ್ರೇಮ್‌ ಪುತ್ರ ಹಾಗೂ ಪುತ್ರಿಯೂ ಸಹ ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಈ ಹಿಂದೆ ಪ್ರೇಮ್‌ ಕಾವೇರಿ ನೀರು ಹಂಚಿಕೆ ವಿವಾದದ ವಿಚಾರವಾಗಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ