ನವದೆಹಲಿ: ಜನವರಿ ೨೨ ರಂದು ಅಯೋಧ್ಯೆಯಲ್ಲಿ ಉದ್ಘಾಟನೆಯಾದ ಭವ್ಯ ರಾಮಮಂದಿರ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಕಮಲ್ ಹಾಸನ್, ತಾವು ಮೂವತ್ತು ವರ್ಷಗಳ ಹಿಂದೆ ಹೊಂದಿದ್ದ ಅದೇ ಉತ್ತರವೇ ನನ್ನದಾಗಿದೆ ಎಂದು ಹೇಳಿದ್ದಾರೆ. ಆಮೂಲಕ ತಮ್ಮ ನಿಲುವನ್ನು ನೇರವಾಗಿ ತಿಳಿಸದೆಯೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ಉದ್ಘಾಟನೆ ಕುರಿತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಜನರ ಮಚ್ಚುಗೆಗೆ ಪಾತ್ರವಾಗಿತ್ತು. ಇನ್ನು ಭಾರತೀಯ ಕೆಲವು ಸೆಲೆಬ್ರೆಟಿಸ್ ಸೇರಿದಂತೆ ಇತರ ನಾಯಕರು ತಮ್ಮ ವಿರೋಧ ನಿಲುವನ್ನು ಸ್ಪಷ್ಟಪಡಿಸಿದ್ದರು.
ಡಿಸೆಂಬರ್ 6, 1992 ರಂದು ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ತಾವು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿರುವ ಕಮಲ್, “ಬಾಬ್ರಿ ಮಸೀದಿ ಧ್ವಂಸಗೊಳಿಸುವ ಹಕ್ಕು ಯಾರಿಗೂ ಇರಲಿಲ್ಲ. ತಂಜಾವೂರು ದೇವಸ್ಥಾನ ಮತ್ತು ವೆಲೆಂಕಣ್ಣಿ ಚರ್ಚ್ ಹೇಗೆ ನನ್ನದೋ ಅದೇ ರೀತಿ ಆ ಕಟ್ಟಡ ಕೂಡ ನನ್ನದು, ಎಂದು ಅವರು ಆಗ ಹೇಳಿದ್ದರು. ಬಾಬ್ರಿ ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ಆಗ ಕಮಲ್ ಪ್ರಮುಖರಾಗಿದ್ದರು.
2020ರಲ್ಲಿ ಸುಪ್ರೀಂ ಕೋರ್ಟ್ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸಹಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳ ಪ್ರಕರಣವನ್ನು ಖುಲಾಸೆಗೊಳಿಸಿದಾಗ ಕಮಲ್ ಹಾಸನ್ ಮಾಡಿದ್ದ ಟ್ವೀಟ್ ಗಮನ ಸೆಳೆದಿತ್ತು. “ಗಟ್ಟಿಯಾದ ಪುರಾವೆ ಮತ್ತು ಬಲವಾದ ವಾದಗಳನ್ನು ಮಂಡಿಸದೇ ಇರುವುದು ಪ್ರಾಸಿಕ್ಯೂಶನ್‌ನ ಬೇಜವಾಬ್ದಾರಿಯಾಗಿದೆಯೇ ಅಥವಾ ಇದೊಂದು ಯೋಜಿತ ಕ್ರಮವೇ? ನ್ಯಾಯಕ್ಕಾಗಿ ಭಾರತೀಯರ ಆಶಾವಾದ ನಿಷ್ಟ್ರಯೋಜಕವಾಗಬಾರದು,” ಎಂದು ಬರೆದುಕೊಂಡಿದ್ದರು.
ಇದೀಗ ರಾಮ ಮಂದಿರ ಉದ್ಘಾಟನೆ ಕುರಿತು ತಮ್ಮ ಸ್ಪಷ್ಟ ನಿಲುವನ್ನು ಸಹಾ ಅವರು ವ್ಯಕ್ತಪಡಿಸಿದ್ದು, ಮೂವತ್ತು ವರ್ಷಗಳ ಹಿಂದೆ ಹೊಂದಿದ್ದ ಅದೇ ಉತ್ತರವೇ ನನ್ನದಾಗಿದೆ ಎಂದು ನಟ ಕಲಮ್ ಹಾಸನ್ ಹೇಳಿದ್ದಾರೆ.





