ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದಿರುವುದನ್ನು ಖಂಡಿಸಿ ದರ್ಶನ್ ತೂಗುದೀಪ ಅಭಿಮಾನಿ ಹರೀಶ್ ನಾಯ್ಡು ವರು ಏಕಾಂಗಿ ಪ್ರತಿಭಟನೆ ನಡೆಸಿದರು.

ನಗರದ ಎಂಜಿ ರಸ್ತೆಯಲ್ಲಿರುವ ತೂಗುದೀಪ ಶ್ರೀನಿವಾಸ್ ವೃತ್ತ (ಲಲಿತ ಮಹಲ್ ಗೇಟ್) ಗುರುವಾರ ದರ್ಶನ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ ಹರೀಶ್ ನಾಯ್ಡು ಎಂಬ ಅಭಿಮಾನಿ ದರ್ಶನ್ ಪರ ಘೋಷಣೆ ಕೂಗಿ. ಆರೋಪಿಯನ್ನು ಬಂಧಿಸಿ, ಗಡಿಪಾರು ಮಾಡಬೇಕು. ನೆಚ್ಚಿನ ನಟನಿಗೆ ಅವಮಾನ ಮಾಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
.





