ಇಂಫಾಲ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾನುವಾರ ಭಾಗವಹಿಸಬೇಕಿದ್ದ ಮಣಿಪುರದ ಇಂಫಾಲ್‌ನ ಫ್ಯಾಶನ್ ಶೋ ಸ್ಥಳದ ಸಮೀಪದಲ್ಲಿ ಪ್ರಬಲ ಸ್ಪೋಟ ಸಂಭವಿಸಿದೆ.
ಇಂಫಾಲ್ನ ಹಟ್ಟ ಕಂಜೇಲ್ಬಂಗ್ ಪ್ರದೇಶದಲ್ಲಿ ಈ ಸ್ಛೋಟ ಸಂಭವಿಸಿದ್ದು, ಯಾರಿಗೂ ಗಾಯಗಳಾದ ಬಗ್ಗೆ ವರದಿ ಬಂದಿಲ್ಲ. ಫ್ಯಾಶನ್ ಶೋ ನಡೆಯಬೇಕಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಶನಿವಾರ ಸ್ಛೋಟ ಸಂಭವಿಸಿದೆ. ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಸಹ ಭಾಗವಹಿಸಬೇಕಿತ್ತು. ಸುಧಾರಿತ ಸ್ಛೋಟಕ ಅಥವಾ ಗ್ರೆನೇಡ್ ಯಾವುದರಿಂದ ಸ್ಪೋಟ ಸಂಭವಿಸಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.





