ಪೊನ್ನತ್ಮೊಟ್ಟೆ ಗ್ರಾಮವೊಂದರಲ್ಲಿ ಎಲ್ಲಿ ನೋಡಿದರೂ ಬಟರ್ ಫ್ರೂಟ್ ನರ್ಸರಿ; ಸ್ವ ಯಂ ಉದ್ಯೋಗ ಜೊತೆಗೆ ಉತ್ತಮ ಆದಾಯ
-ಕೆ.ಎಂ. ಇಸ್ಮಾಯಿಲ್ ಕಂಡಕರೆ
ಕೊಡಗು ಜಿಲ್ಲೆಯಲ್ಲಿ ಬೆಣ್ಣೆ ಹಣ್ಣಿಗೆ ಉತ್ತಮ ಬೇಡಿಕೆ ನಿರ್ಮಾಣವಾದ ಹಿನ್ನೆಲೆ ಗ್ರಾಮವೊಂದರ ಬಹುತೇಕ ಮಂದಿ ಬಟರ್‌ಫ್ರೂಟ್ ನರ್ಸರಿಯಲ್ಲಿ ತೊಡಗಿದ್ದು, ಉತ್ತಮ ಆದಾಯ ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್ಮೊಟ್ಟೆ ಗ್ರಾಮದಲ್ಲಿ ಎತ್ತ ಕಡೆ ನೋಡಿದರೂ ಬಟರ್ ಫ್ರೂಟ್(ಬೆಣ್ಣೆ ಹಣ್ಣು) ಕಸಿ ಮಾಡಿರುವ ನರ್ಸರಿ ಕಂಡುಬರುತ್ತವೆ. ಮನೆಯ ಹಿಂಭಾಗ, ಮುಂಭಾಗ ಸಣ್ಣ ಜಾಗದಲ್ಲೂ ಫ್ರೂಟ್ ಕಸಿ ಮಾಡಿರುವ ಗಿಡಗಳು ಕಾಣಸಿಗುತ್ತದೆ. ಒಂದೇ ವರ್ಷದಲ್ಲಿ ಪೊನ್ನತ್‌ಮೊಟ್ಟೆ ಗ್ರಾಮದಿಂದ ಲಕ್ಷಾಂತರ ಬಟರ್‌ಫ್ರೂಟ್ ಕಸಿ ಮಾಡಿರುವ ಗಿಡಗಳು ರಾಜ್ಯ ಹಾಗೂ ಹೊರ ರಾಜ್ಯಕ್ಕೆ ರಫ್ತಾಗುತ್ತಿವೆ. ಗ್ರಾಮದ ಶೇ.೯೫ರಷ್ಟು ಜನತೆ ಬಟರ್‌ಫ್ರೂಟ್ ನರ್ಸರಿಯಲ್ಲಿ ತೊಡಗಿಕೊಂಡು, ಸ್ವಯಂ ಉದ್ಯೋಗದ ಮೂಲಕ ಲಕ್ಷಾಂತರ ರೂ. ಲಾಭಗಳಿಸುತ್ತಿದ್ದಾರೆ.
೧೦ ಲಕ್ಷಕ್ಕೂ ಅಧಿಕ ಕಸಿ ಗಿಡಗಳು
ಪ್ರಸ್ತುತ ಈ ಗ್ರಾಮದಲ್ಲಿ ೧೦ ಲಕ್ಷಕ್ಕೂ ಅಧಿಕ ಬಟರ್ ಫ್ರೂಟ್ ಕಸಿ ಗಿಡಗಳನ್ನು ಬೆಳೆಸಲಾಗುತ್ತಿದೆ. ತೋಟದ ಕೆಲಸ, ಆಟೋ ಚಾಲಕರು ಹಾಗೂ ಕೂಲಿ ಕಾರ್ಮಿಕರು ತಮ್ಮ ವೃತ್ತಿಯನ್ನು ಬದಲಿಸಿ ಇದೀಗ ಕಳೆದ ಎರಡು ವರ್ಷಗಳಿಂದ ಬಟರ್ ಫ್ರೂಟ್ ಗಿಡಗಳ ನರ್ಸರಿಯಲ್ಲಿ ತೊಡಗಿಕೊಂಡು, ಪೊನ್ನತ್ಮೊಟ್ಟೆ ಗ್ರಾಮದ ಜನರು ಇತರರಿಗೆ ವಾದರಿಯಾಗಿದ್ದಾರೆ.
ಪೊನ್ನತ್ಮೊಟ್ಟೆ ಗ್ರಾಮದಲ್ಲಿ ಕನಿಷ್ಠ ಪ್ರತಿಯೊಬ್ಬರ ಮನೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಗಳಿವೆ. ನರ್ಸರಿ ಮಾಡುತ್ತಿರುವ ಬಹುತೇಕರು ಕಸಿ ಗಿಡಗಳನ್ನು ಮಾಡುತ್ತಿದ್ದಾರೆ. ಕಸಿ ಗಿಡಕ್ಕೆ ಭಾರೀ ಬೇಡಿಕೆ ಇದೆ. ಕಸಿ ಮಾಡಿರುವ ಗಿಡ ಒಂದಕ್ಕೆ ೧೦೦ ರಿಂದ ೧೫೦ ರೂ. ವರೆಗೆ ಮಾರಾಟವಾಗುತ್ತಿದೆ. ಒಂದೇ ವರ್ಷದಲ್ಲಿ ಕೇರಳ, ಮಹಾರಾಷ್ಟ್ರ, ಬೆಂಗಳೂರಿಗೆ ಈ ಗ್ರಾಮದಿಂದ ಎರಡು ಲಕ್ಷಕ್ಕೂ ಅಧಿಕ ಬಟರ್ ಫ್ರೂಟ್ ಕಸಿ ವಾಡಿರುವ ಗಿಡಗಳು ವಾರಾಟವಾಗಿವೆ.
ಗ್ರಾಮದ ಜನರು ನರ್ಸರಿ ಮಾಡಲು ಜಾಗವಿಲ್ಲದೆ, ಬೇರೆಯವರ ಸ್ಥಳವನ್ನು ಐದಾರು ವರ್ಷಕ್ಕೆ ದತ್ತು ಪಡೆದು, ಬಟರ್ ಫ್ರೂಟ್ ಕಸಿ ಗಿಡಗಳ ನರ್ಸರಿಯನ್ನು ಮಾಡುತ್ತಿದ್ದಾರೆ. ಅಲ್ಲದೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲೂ ಬಟರ್ ಫ್ರೂಟ್ ಕಸಿ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ. ಹಾಗೂ ಬಟರ್ ಕಸಿ ಗಿಡಗಳನ್ನು ಯಾವ ರೀತಿಯಲ್ಲಿ ನಿರ್ವಹಣೆ ಮಾಡುವುದು ಎಂಬುದರ ಬಗ್ಗೆ ಕೂಡ ಕಾರ್ಯಗಾರ ನಡೆಸಲಾಗುತ್ತಿದೆ.
ಬಟರ್ ಫ್ರೂಟ್ ಕಸಿ ಮಾಡಿದ ಗಿಡಗಳ ನರ್ಸರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಪೊನ್ನತ್ಮೊಟ್ಟೆ, ಕಂಡಕರೆ, ಚೆಟ್ಟಳ್ಳಿ, ಮಲಕೋಡ್, ಕೂಡ್ಲೂರು ಚೆಟ್ಟಳ್ಳಿ, ನಂಜರಾುಂಪಟ್ಟಣ, ಸಿದ್ದಾಪುರ, ನೆಲ್ಲಿಹುದಿಕೇರಿ ಭಾಗದಲ್ಲಿ ಹೆಚ್ಚುತ್ತಿದೆ. ಜಿಲ್ಲೆಯ ಬಹುತೇಕ ಕಾಫಿ ತೋಟಗಳ ಮಧ್ಯೆ, ಬಟರ್ ಫ್ರೂಟ್ ಗಿಡಗಳನ್ನು ಬೆಳೆಸಲಾಗುತ್ತಿದೆ. ಎಲ್ಲೋ ಕಾಡು ಸೇರಬೇಕಾದ ಬಟರ್ ಫ್ರೂಟ್ ಬೀಜಕ್ಕೂ ಭಾರೀ ಡಿಮ್ಯಾಂಡ್ ಬಂದಿದೆ. ನರ್ಸರಿಯವರು, ಒಂದು ಬಟರ್ ಫ್ರೂಟ್ ಬೀಜಕ್ಕೆ ೫ ರಿಂದ ೮ ರೂ. ನೀಡಿ ಖರೀದಿಸುತ್ತಿದ್ದಾರೆ.
ಕೊಡಗಿನಲ್ಲಿ ಪೂರಕ ವಾತವರಣ
ಬಟರ್ ಫ್ರೂಟ್ ಗಿಡಗಳನ್ನು ಬೆಳೆಸಲು ಕೊಡಗು ಜಿಲ್ಲೆಯಲ್ಲಿ ಪೂರಕವಾದ ವಾತಾವರಣವಿದೆ. ಆದರೆ ಬಟರ್ ಫ್ರೂಟ್ ಕಸಿ ಗಿಡಗಳನ್ನು ನಿರ್ವಹಣೆ ಮಾಡುವುದು ಕೊಂಚ ಕಷ್ಟ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಏರುಪೇರಾಗುತ್ತಿರುವುದುರಿಂದ, ಬಟರ್ ಫ್ರೂಟ್ ಕಸಿ ಗಿಡಗಳ ನರ್ಸರಿಯನ್ನು ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಬಟರ್ ಫ್ರೂಟ್ ಕಸಿ ಗಿಡಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ಎರಡು ತಿಂಗಳಲ್ಲಿ ಗಿಡಗಳು ಬೆಳೆುುಂತ್ತದೆ. ಹಾಗೂ ಮೂರ್ನಾಲ್ಕು ವರ್ಷದಲ್ಲಿ ಬಟರ್ ಫ್ರೂಟ್ ಫಸಲು ನೀಡುತ್ತದೆ.
ಬಟರ್ ಫ್ರೂಟ್ ಕಸಿ ಮಾಡಿದ ಗಿಡಗಳಿಗೆ ಹೊರ ರಾಜ್ಯದಲ್ಲಿ ಬೇಡಿಕೆಯಿದೆ. ನಾನು ಕೂಡ ಬಟರ್ ನರ್ಸರಿಯಲ್ಲಿ ತೊಡಗಿಕೊಂಡಿದ್ದೇನೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಬಟರ್ ಫ್ರೂಟ್ ಗಿಡಗಳನ್ನು ಮಾರಾಟ ಮಾಡಲು ನಮಗೆ ಸಂಪರ್ಕ ಇದ್ದರೆ ಒಳ್ಳೆಯ ಲಾಭ ಗಳಿಸಬಹುದು. ಬಟರ್ ಫ್ರೂಟ್ ಕಸಿ ಗಿಡಗಳನ್ನು ನಿರ್ವಹಣೆ ಮಾಡವುದು ಸ್ವಲ್ಪ ಕಷ್ಟ. ಕಸಿ ಗಿಡಗಳು ಕೈ ಹಿಡಿದರೆ, ಒಳ್ಳೆಯ ಆದಾಯಗಳಿಸಬಹದು.
-ಮಹೇಶ್, ಬಟರ್ ಫ್ರೂಟ್ ನರ್ಸರಿ ವಾಲೀಕರು, ಪೊನ್ನತ್‌ಮೊಟ್ಟೆ
ಕೊಡಗಿನಲ್ಲಿ ಬಟರ್ ಫ್ರೂಟ್ ಬೆಳೆಯಲು ಉತ್ತಮ ವಾತಾವರಣವಿದೆ. ಇದಲ್ಲದೆ ರಾಜ್ಯದ ವಿವಿಧ ಕಡೆಗಳಲ್ಲೂ ಬಟರ್ ಫ್ರೂಟ್ ಬೆಳೆಯಬಹುದಾಗಿದೆ. ಕರ್ನಾಟಕದಲ್ಲಿ ಹೆಚ್ಚು ಬಟರ್ ಫ್ರೂಟ್ ಲಭ್ಯವಾಗುತ್ತಿಲ್ಲ. ಕೊಡೈಕೆನಾಲ್‌ನಿಂದ ಹೆಚ್ಚಾಗಿ ಬರುತ್ತಿದೆ. ಆದ್ದರಿಂದ ಈಗ ಎಲ್ಲ ರೈತರು ಬಟರ್ ಫ್ರೂಟ್ ಬೆಳೆಯುತ್ತಿದ್ದಾರೆ.
-ಜಿ. ಕರುಣಾಕರಣ್, ವಿಜ್ಞಾನಿ, ಕೇಂದ್ರೀಯ ತೋಟಗಾರಿಕಾ ಇಲಾಖೆ ಚೆಟ್ಟಳ್ಳಿ,