Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯೋಗ ಕ್ಷೇಮ: ಮೂಳೆಗೆ ಆಸ್ಟಿಯೊಪೊರೊಸಿಸ್ ಬರದಂತೆ ಕಾಯಿರಿ

ಇಂದು ವಿಶ್ವ ಆಸ್ಟಿಯೊಪೊರೊಸಿಸ್ ದಿನ; ಮೂಳೆಗಳ ಆರೋಗ್ಯದ ಬಗ್ಗೆ ಜಾಗೃತಿ

ವಿ. ವಿನೋಲಿಯಾ ರಾಜ್
ಪ್ರಾಂಶುಪಾಲರು
ವಿದ್ಯಾವಿಕಾಸ ನರ್ಸಿಂಗ್ ಕಾಲೇಜು, ಮೈಸೂರು

ಮಾನವನ ದೇಹದಲ್ಲಿ ೨೦೬ರಿಂದ ೨೧೩ ಮೂಳೆಗಳಿರುತ್ತವೆ. ಇಡೀ ದೇಹ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಅಸ್ಥಿಪಂಜರ ವ್ಯಕ್ತಿ ಆರೋಗ್ಯದಲ್ಲಿಯೂ ಪ್ರಮುಖವಾದುದು. ಆದರೆ  ಆಸ್ಟಿಯೊಪೊರೊಸಿಸ್ (ಅಸ್ಥಿ ರಂಧ್ರತೆ) ಎಂಬ ರೋಗವು ಹೆಚ್ಚಿನವರನ್ನು ಇಂದು ಕಾಡುತ್ತಿದೆ. ೧೯೭೦ರ ತನಕ ಇದೊಂದು ಕಾಯಿಲೆೆಯೆoದು ಪರಿಗಣಿಸಿಯೇ ಇರದ ಸಮಸ್ಯೆ ಈಗ ಹೆಚ್ಚಾಗುತ್ತಿದೆ. ಮೂಳೆಯ ಸಾಂದ್ರತೆಯು ವಯಸ್ಸಿನೊಂದಿಗೆ ಕಡಿಮೆಯಾಗುವುದು  ಹಾಗೂ ಮೂಳೆ ಮುರಿತದ ಅಪಾಯಕ್ಕೂ ಸಂಬಂಧ ಇದೆ ಎಂಬುದನ್ನು ಜೀನ್ ಲೋಬ್‌ಸ್ಟಿಯುನ್ ಎಂಬ ಫ್ರೆಂಚ್ ವೈದ್ಯ ಮೊದಲ ಬಾರಿಗೆ ತಿಳಿಸಿದ. ಅದರಿಂದ ಈಚೆಗೆ ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದು ಸಮಸ್ಯೆಗೆ ಪರಿಹಾರವನ್ನೂ ಕಂಡುಹಿಡಿಯಲಾಗಿದೆ.

ಆಸ್ಟಿಯೊಪೊರೊಸಿಸ್ ಸೊಸೈಟಿ ಸ್ಥಾಪನೆ

೧೯೮೬ರಂದು ಯುನೈಟೆಡ್ ಕಿಂಗ್‌ಡಂ ಚಾರಿಟಿುಯು ಆಸ್ಟಿಯೊಪೊರೋಸಿಸ್‌ಗೆ ತಪಾಸಣೆ, ನಿಯoತ್ರಣ ಹಾಗೂ ಚಿಕಿತ್ಸೆ ನೀಡಲು ತೀರ್ಮಾನಿಸಿ ನ್ಯಾಷನಲ್ ಆಸ್ಟಿಯೊ ಪೊರೋಸಿಸ್ ಸೊಸೈಟಿಯನ್ನು ಸ್ಥಾಪಿಸಿತು. ಮೂಳೆಯ ಆರೋಗ್ಯವನ್ನು ಹೆಚ್ಚಿಸಲು, ಆಸ್ಟಿಯೊಪೊರೋಸಿಸ್‌ಗೆ ತುತ್ತಾದವರ ಜೀವನವನ್ನು ಸುಧಾರಿಸಲು ಹಾಗೂ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇದು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಜೊತೆಗೆ ಅ. ೨೦ ರಂದು ಇಂದು ವಿಶ್ವ ಆಸ್ಟಿಯೊಪೊರೊಸಿಸ್ ದಿನವನ್ನು ಆಚರಣೆ ಮಾಡುತ್ತಾ ಜನರಲ್ಲಿ ಅರಿವು ಮೂಡಿಸುತ್ತಿದೆ.

ರೋಗದ ಪ್ರಮುಖ ಮಾಹಿತಿ
* ಆಸ್ಟಿಯೊಪೊರೋಸಿಸ್ (ಅಸ್ಥಿರಂಧ್ರತೆ) ಮೂಳೆಗೆ ಸಂಬಂಧಿಸಿದ ರೋಗವಾಗಿದ್ದು, ಮೂಳೆಗಳು ಮುರಿಯುವ ಅಥವಾ ಬಿರುಕು ಬಿಡುವ ಸಾಧ್ಯತೆಗಳು ಹೆಚ್ಚು.

* ಮೂಳೆಯ ಖನಿಜಾಂಶಗಳ ಸಾಂದ್ರತೆ ಕ್ಷೀಣಗೊಂಡು, ಮೂಳೆಯ ಸೂಕ್ಷ್ಮರಚನೆಯಲ್ಲಿ ವ್ಯತ್ಯಾಸವಾಗಿ ನೋವು ಕಾಣಿಸಿಕೊಳ್ಳುತ್ತದೆ.

* ಮೂಳೆಯಲ್ಲಿ ಕೊಲಾಜೆನಸ್ ಅಲ್ಲದ ಇತರೆ ವಿಭಿನ್ನ ಪ್ರೊಟೀನ್‌ಗಳ ಪ್ರವಾಣದಲ್ಲಿ ವ್ಯತ್ಯಾಸವಾಗುತ್ತದೆ.

* ಋತುಬಂಧ ಹಂತ ದಾಟಿದ ಮಹಿಳೆಯರಲ್ಲಿ ಕಂಡುಬರುವ ಆಸ್ಟಿಯೊಪೊರೋಸಿಸ್ ಅನ್ನು ಪೋಸ್ಟ್‌ಮೆನೋಪಾಸ್ ಆಸ್ಟಿಯೊಪೊರೋಸಿಸ್ ಎಂದು ಕರೆಯಲಾಗುತ್ತದೆ, ಇದು ಪುರುಷರಲ್ಲಿಯೂ ಕಂಡುಬರಬಹುದು.

* ಕೆಲವು ನಿರ್ದಿಷ್ಟ ಹಾರ್ಮೋನುಗಳ ವ್ಯತ್ಯಯದಿಂದಾಗಿ ಮತ್ತು ಇತರೆ ತೀವ್ರ ಸ್ವರೂಪದ ರೋಗಗಳು ಅಥವಾ ಔಷಧಗಳ ಅಡ್ಡ ಪರಿಣಾಮಗಳಿಂದಲೂ ಈ ಸಮಸ್ಯೆ ಬರಬಹುದು.

* ಗ್ಲೂಕೊಕಾರ್ಟಿಕಾ್ಂಡ್‌ಗಳ ವ್ಯತ್ಯಯದಿಂದಾಗಿ ಬರುವ ಈ ರೋಗಕ್ಕೆ ಸ್ಟೀರಾ್ಂಡ್- ಅಥವಾ ಗ್ಲೂಕೊಕಾರ್ಟಿಕಾ್ಂಡ್-ಇಂಡ್ಯೂಸ್ಡ್ ಆಸ್ಟಿಯೊಪೊರೋಸಿಸ್ ಎಂದು ಕರೆಯಲಾಗುತ್ತದೆ.

* ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಮತ್ತು ಕೆಲವು ಬಾರಿ ಔಷಧಗಳ ಸಹಾಯದಿಂದ ಆಸ್ಟಿಯೊಪೊರೋಸಿಸ್ ಬರದಂತೆ ತಡೆಯಬಹುದಾಗಿದೆ.

* ಸೂಕ್ತ ವ್ಯಾಯಾಮ, ಕ್ಯಾಲ್ಸಿಯo, ಎ ಜೀವಸತ್ವ, ಬಿಸ್‌ಫಾಸ್ಪೋನೇಟ್‌ಗಳು ಹಾಗೂ ಇನ್ನಿತರೆ ಔಷಧಗಳ ಸರಿಯಾದ ಬಳಕೆಯಿಂದ ರೋಗದ ನಿಯಂತ್ರಣ ಸಾಧ್ಯ.

ಜೀವನ, ಆಹಾರ ಶೈಲಿ ಹೀಗಿರಲಿ

ಅಸ್ಥಿರಂಧ್ರ ಸಮಸ್ಯೆ ಬಾರದ ರೀತಿ ನೋಡಿಕೊಳ್ಳಬೇಕಾದರೆ ನಮ್ಮ ಜೀವನ ಮತ್ತು ಆಹಾರ ಕ್ರಮ ಪ್ರಮುಖ ಪಾತ್ರ ವಹಿಸುತ್ತವೆ. ನಿಗದಿತ ವ್ಯಾಯಾಮ, ಉತ್ತಮ ಆಹಾರ ಸೇವನೆ ಎರಡು ಮುಖ್ಯ.

* ಮದ್ಯಪಾನ, ಧೂಮಪಾನವನ್ನು ನಿಲ್ಲಿಸುವುದು ಅಸ್ತಿರಂಧ್ರ ಸಮಸ್ಯೆಯಿಂದ ಹೊರಬರಲು ಸಹಾಯ ವಾಡುತ್ತದೆ.
* ಬೆಲ್ಲದಿಂದ ಮಾಡಿದ ಪದಾರ್ಥಗಳು, ತಾಂಬೂಲ ಸೇವನೆ ಪರಿಣಾಮಕಾರಿ. ಇದರಿಂದ ದೇಹಕ್ಕೆ ಕ್ಯಾಲ್ಸಿಯಂ ಪೂರೈಕೆಯಾಗುತ್ತದೆ.

* ರಾಗಿ, ಸೊಪ್ಪಿನಿಂದ ಮಾಡಿದ ಆಹಾರ, ಧಾನ್ಯಗಳು, ಹಾಲಿನ ಬಳಕೆ ಮಾಡುವುದು ಸೂಕ್ತ.

* ಕಡಿಮೆ ಪ್ರಮಾಣದ ದೈಹಿಕ ಚಟುವಟಿಕೆ, ಅತಿಯಾದ ವ್ಯಾಯಾಮದಿಂದಲೂ ಸಮಸ್ಯೆ.

* ೬೫ ವರ್ಷ ಮೇಲ್ಪಟ್ಟವರು ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿ ಸೂಕ್ತ ಔಷಧ ತೆಗೆದುಕೊಳ್ಳುವುದು ಉತ್ತಮ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ