Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯೋಗ ಕ್ಷೇಮ : ಆರೋಗ್ಯಕ್ಕೆ ಒಳ್ಳೆಯದ್ದು ಹರಿವೆ ಸೊಪ್ಪು

ವೈಜ್ಞಾನಿಕವಾಗಿ ಅಮರಾಂತುಸ್ ಎಂದು ಕರೆಯಲ್ಪಡುವ ಹರಿವೆ ಸೊಪ್ಪು ಆರೋಗ್ಯದ ಮೂಲ. ದಂಟಿನ ಸೊಪ್ಪು ಎನ್ನುವ ಹೆಸರಿನಿಂದಲೂ ಕರೆಯಲ್ಪಡುವ ಇದರಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಬಗೆಗಳಿವೆ. ಹಲವಾರು ಬಣ್ಣ, ರುಚಿ, ಎತ್ತರಗಳನ್ನು ಒಳಗೊಂಡಿರುವ ಈ ಸೊಪ್ಪು ಪ್ರೋಟೀನ್, ಕ್ಯಾಲ್ಸಿುಂಂ, ಕಬ್ಬಿಣ, ತಾಮ್ರ ಹಾಗೂ ಅಗತ್ಯ ಜೀವಸತ್ವಗಳ ಆಗರ.

ರಿಬೊಫ್ಲಾವಿನ್, ನಿಾಂಸಿನ್, ಥೈಮೇನ್, ವಿಟಮಿನ್ ಬಿ ೬ ಅಂಶಗಳು ಹರಿವೆುಂಲ್ಲಿ ಇದ್ದು, ಇವು ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಲು ಸಹಾಯ ಮಾಡುತ್ತವೆ. ಅಲ್ಲದೇ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಈ ಸೊಪ್ಪಿನಲ್ಲಿ ಕೊಬ್ಬಿನ ಅಂಶ ಇಲ್ಲದೇ ಇರುವುದರಿಂದ ತೂಕ ಇಳಿಸಬೇಕು ಎಂದುಕೊಂಡವರಿಗೆ ಇದು ಒಳ್ಳೆಯ ಆಯ್ಕೆ. ಜೊತೆಗೆ ಅತಿ ಹೆಚ್ಚಿನ ನಾರಿನ ಅಂಶ ಇದರಲ್ಲಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ.

ಹರಿವೆಯ ಅನುಕೂಲ

* ಹರಿವೆ ಸೊಪ್ಪು ರಕ್ತದಲ್ಲಿನ ಕೊಲೆಸ್ಟಾಲ್ ಅಂಶವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ನಿಯಂತ್ರಣವಾಗುತ್ತದೆ. ಅಲ್ಲದೇ ರಕ್ತದ ಒತ್ತಡವೂ ಕಡಿಮೆಯಾಗುತ್ತದೆ.

* ಹರಿವೆ ಸೊಪ್ಪು ದೇಹಕ್ಕೆ ಬೇಕಾಗಿರುವ ಶೇ.೯೭ರಷ್ಟು ವಿಟಮಿನ್ ಒದಗಿಸುತ್ತದೆ. ದೇಹದಲ್ಲಿ ಕರಗಬಲ್ಲ ಫೈಬರ್, ಬೆಟಾ ಕೆರೊಟೆನ್, ಝಿುಂಕ್ಸಾಂಥಿನ್ ಮತ್ತು ಲುಟೇನ್ ಅಂಶವಿದ್ದು, ಇವು ಕ್ಯಾನ್ಸರ್ ನಿವಾರಕಗಳಾಗಿ ಕೆಲಸ ಮಾಡುತ್ತವೆ.

* ಸೊಪ್ಪಿನಲ್ಲಿ ಇರುವ ವಿಟಮಿನ್ ಎ ನಿಂದಾಗಿ ಚರ್ಮ ಹಾಗೂ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೇ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

* ನಿಯಮಿತ ಹರಿವೆ ಸೊಪ್ಪಿನ ಸೇವನೆಯಿಂದ ಜೀರ್ಣಕ್ರಿೆುಂ ಉತ್ತಮಗೊಳ್ಳುತ್ತದೆ. ಸಸ್ಯಜನ್ಯ ಪ್ರೋಟೀನ್‌ಗೆ ಇದು ಉತ್ತಮ ಆಗರ.

* ಹರಿವೆ ಬೀಜಗಳೂ ಉತ್ತಮ ಆರೋಗ್ಯಕ್ಕೆ ಪೂರಕವಾಗಿದ್ದು, ಇವುಗಳನ್ನು ಹಿಟ್ಟು ಮಾಡಿಸಿ ಇತರ ಹಿಟ್ಟುಗಳೊಂದಿಗೆ ಮಿಶ್ರಮ ಮಾಡಿ ಸೇವನೆ ಮಾಡಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ