Mysore
24
broken clouds

Social Media

ಗುರುವಾರ, 10 ಏಪ್ರಿಲ 2025
Light
Dark

ಒಳನಾಡು ಮೀನುಗಾರಿಕೆಗೆ ಮುಂದಾಗಿ

ಕರ್ನಾಟಕ 320 ಕಿಮೀ ಉದ್ದದ ಕರಾವಳಿ ತೀರ ಹೊಂದಿದೆ. ಆ ಮೂಲಕ ಸಮುದ್ರದ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ಅದರಂತೆ 5.65 ಲಕ್ಷ ಹೆಕ್ಟೇರಿನಷ್ಟು ವಿವಿಧ ಒಳನಾಡು ಜಲಸಂಪನ್ಮೂಲಗಳೂ ಇದ್ದು ಒಳನಾಡು ಮೀನುಗಾರಿಕೆ ಹೆಚ್ಚಿನ ಅವಕಾಶವೂ ಇದೆ.

ಮೊನ್ನೆ ಮೊನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಒಳನಾಡು ಮೀನುಗಾರರ ಸಮಾವೇಶ ನಡೆದಿದೆ. ಅದಕ್ಕೆ ಪೂರಕವಾಗಿ ಉತ್ತಮ ಮಳೆಯಿಂದ ನಾಡಿನಾದ್ಯಂತ ಇರುವ ಬಹುತೇಕ ಕರೆ-ಕಟ್ಟೆಗಳು ತುಂಬಿವೆ. ಇದರಿಂದಾಗಿ ಒಳನಾಡು ಮೀನುಗಾರಿಕೆಗೆ ಮಹತ್ವ ಬಂದಿದೆ. ಜೊತೆಗೆ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿಯೂ ಮೀನುಗಾರರಿಗೆ ಹಲವಾರು ಸೌಲಭ್ಯಗಳು ದೊರೆಯುತ್ತಿವೆ.

ರಾಜ್ಯದಲ್ಲಿ ಇರುವ ತರಬೇತಿ ಕೇಂದ್ರಗಳು

ಕೆಆರ್‌ಎಸ್, ಮಂಡ್ಯ (9535373793)

ಬೇತಮಂಗಲ (ಕೋಲಾರ)

ಬಿ.ಆರ್. ಪ್ರಾಜೆಕ್ಟ್ ಭದ್ರಾವತಿ

ಕಬಿನಿ, ಎಚ್.ಡಿ. ಕೋಟೆ (9986755434)

  •  ತರಬೇತಿಯಲ್ಲಿ ಕನಿಷ್ಟ ೨೫ರಿಂದ ಗರಿಷ್ಟ ೪೦ ಮಂದಿಗೆ ಅವಕಾಶ
  •  ತರಬೇತಿ ಮುಗಿಸಿದವರಿಗೆ ಪ್ರಮಾಣ ಪತ್ರ
  •  ಪ್ರತಿ ದಿನದ ತರಬೇತಿಗೆ ೩೦೦ ರೂ. ತರಬೇತಿ ಭತ್ಯೆ

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 8277200300

ಇಲಾಖೆಯಿಂದ ಸಿಗುವ ಸೌಲಭ್ಯಗಳು

* ಮೀನು ಸಾಕಾಣೆ ಮಾಡುವವರೊಂದಿಗೆ ಸಮನ್ವುಂತೆ, ಮೇಲ್ವಿಚಾರಣೆ

* ಒಳನಾಡು ಮೀನುಗಾರಿಕೆ ವಲುಂದ ಅಭಿವೃದ್ಧಿಗಾಗಿ ಸಂಪನ್ಮೂಲಗಳ ಗರಿಷ್ಟ ಬಳಕೆಗೆ ಪೂರಕವಾಗಿ ಕಾರ್ಯ

* ಮೀನುಗಾರರ ಸಾವಾಜಿಕ ಹಾಗೂ ಆರ್ಥಿಕ ಸ್ಥಿತಿುಂನ್ನು ಸುಧಾರಿಸುವುದು

* ಮೀನು ವಾರುಕಟ್ಟೆಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಸೃಜಿಸುವುದು

* ಜಲಕೃಷಿಗೆ ಬೇಕಾದ ಉತ್ತಮ ಗುಣಮಟ್ಟದ ಮೀನುಮರಿಗಳ ಉತ್ಪಾದನೆ ಮತ್ತು ಸರಬರಾಜು

* ಮೀನು ಕೃಷಿಕರಿಗೆ ತಾಂತ್ರಿಕ ಸಹಾುಂ, ಸಿಬ್ಬಂದಿಗೆ ತರಬೇತಿ ನೀಡುವುದು

* ನಿಗದಿತ ಶುಲ್ಕ ಪಾವತಿಸಿ ಜಲಸಂಪನ್ಮೂಲಗಳಾದ ಜಲಾಶುಂಗಳು, ನದಿ ಭಾಗಗಳ ಮೀನು ಹಿಡಿುಂಲು ಪರವಾನಿಗೆ ನೀಡುವುದು.

* ಜೌಗು ಭೂಮಿ ಮತ್ತು ಸ್ವಂತ ಜಮೀನಿನಲ್ಲಿ ಮೀನು ಕೃಷಿ ಕೈಗೊಳ್ಳಲು ಮೀನು ಕೊಳ ನಿರ್ವಾಣಕ್ಕಾಗಿ ಸಹಾುಂ

* ಮೀನು ಮರಿ ಖರೀದಿಗೆ ಸಹಾುಂಧನ, ಅಲಂಕಾರಿಕ ಮೀನುಗಾರಿಕೆುಂನ್ನು ಪ್ರೋತ್ಸಾಹಿಸಲು ಅಕ್ವಾಪಾರ್ಕ್ ಸ್ಥಾಪನೆಗೆ ಸಹಾಯ.

* ಮೀನು ಮರಿ ಕೇಂದ್ರಗಳ ನವೀಕರಣ, ಜಲಾಶುಂದಲ್ಲಿ ಮೀನು ಮರಿ ಬಿತ್ತನೆ.

* ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು ವಿತರಣೆ

* ಮೀನುಗಾರಿಕೆಗೆ ಪೂರಕವಾಗಿ ಮಣ್ಣು ಮತ್ತು ನೀರಿನ ಗುಣಮಟ್ಟ ಉಚಿತ ಪರೀಕ್ಷೆ ಸೌಲಭ್ಯ (ಜಿಲ್ಲಾ ಮಟ್ಟದ ಕಚೇರಿಗಳಲ್ಲಿ)

 ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಜಿಲ್ಲಾವಾರು ಮೀನುಗಾರರ ಸಂಘಗಳನ್ನು ರಚನೆ ಮಾಡಲಾಗುತ್ತಿದೆ. ಆ ಮೂಲಕ ಮೀನುಗಾರರಿಗೆ ಸೂಕ್ತ ಸಹಾಯಧನ, ಮೀನು ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮ ಮೀನುಗಾರಿಕೆ ಮಹಾಮಂಡಲದಿಂದ ಮೀನು ಮರಿ ನೀಡುವುದು, ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದೇವೆ. ಅನುದಾನ ಹಂಚಿಕೆ ಆಧಾರದ ಮೇಲೆ ನಾವು ತರಬೇತಿ ಸೇರಿ ಇತರ ಸೌಲಭ್ಯಗಳನ್ನು ಒದಗಿಸುತ್ತೇವೆ. – ಎಂ.ಎನ್. ಸಿದ್ದಲಿಂಗರಾಜು, ಅಧ್ಯಕ್ಷರು, ಕರ್ನಾಟಕ ರಾಜ್ಯ ಮೀನುಗಾರಿಕೆ ಮಹಾಮಂಡಲ 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ