Mysore
25
clear sky

Social Media

ಗುರುವಾರ, 29 ಜನವರಿ 2026
Light
Dark

ಓದುಗರ ಪತ್ರ: ಕನಿಷ್ಠ ಠೇವಣಿ: ಆರ್‌ಬಿಐ ನಿಯಂತ್ರಣವೇಕಿಲ್ಲ?

ಓದುಗರ ಪತ್ರ

ಹೊಸ ಖಾತೆದಾರರು ತಮ್ಮ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ರೂ. ೫೦ ಸಾವಿರ ಕನಿಷ್ಠ ಠೇವಣಿ ಇಡಬೇಕು ಎಂದು  ಐಸಿಐಸಿಐ ಬ್ಯಾಂಕ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿರುವ  ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರ,  ಉಳಿತಾಯ ಖಾತೆಯಲ್ಲಿ ಎಷ್ಟು ಮೊತ್ತ ಇರಿಸಬೇಕು ಎನ್ನುವುದು   ಆರ್‌ಬಿಐನ ನಿಯಂತ್ರಣ ವ್ಯಾಪ್ತಿಗೆ ಬರುವುದಿಲ್ಲ. ಕನಿಷ್ಠ ಮೊತ್ತ ಅವರ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿರುವುದು ಸರಿಯಲ್ಲ.

ಹಾಗಿದ್ದರೆ ಬ್ಯಾಂಕ್‌ಗಳು  ಆರ್‌ಬಿಐ ನಿಯಂತ್ರಣದಲ್ಲಿ ಇಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಇತ್ತೀಚೆಗೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿದ್ದರೂ ದಂಡ ವಿಧಿಸುವುದಿಲ್ಲ ಎಂದು ಹೇಳಿತ್ತು. ಇದೀಗ ಎಸ್‌ಬಿಐ ಕೂಡ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿರುವುದಾಗಿ  ಪತ್ರಿಕೆಗಳಲ್ಲಿ    ವರದಿಯಾಗಿದೆ.

ಇದು ಸ್ವಾಗತಾರ್ಹ ನಿರ್ಧಾರ.  ಈ ಬಗ್ಗೆ ಬ್ಯಾಂಕ್ ತನ್ನ ಆದೇಶವನ್ನು   ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು. ಅಂಚೆ ಕಚೇರಿ ಯಲ್ಲಿ ಉಳಿತಾಯ ಖಾತೆಯ ಮೊತ್ತಕ್ಕೆ ಶೇ.  ೪ ಬಡ್ಡಿ ನೀಡುತ್ತಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕೇವಲ ಶೇ ೨.೫ರಿಂದ ೩ರಷ್ಟು ಮಾತ್ರ ಬಡ್ಡಿ ನೀಡುತ್ತಾರೆ. ಇದು ಅಂಚೆ ಕಚೇರಿಗಿಂತ ಹೆಚ್ಚಾಗಿರಬೇಕು. ಈ ಬಗ್ಗೆ  ಆರ್‌ಬಿಐ ಗಮನ ಹರಿಸಲಿ.

-ಮುಳ್ಳೂರು ಪ್ರಕಾಶ್,  ಕನಕದಾಸ ನಗರ,  ಮೈಸೂರು

Tags:
error: Content is protected !!