Mysore
19
overcast clouds

Social Media

ಶನಿವಾರ, 09 ನವೆಂಬರ್ 2024
Light
Dark

ಮಗ ವಿಕ್ರಂ ಹೇಳಿದ ಅಪ್ಪ ಚದುರಂಗರ ಸ್ವಾಭಿಮಾನದ ಕಥೆ

• ಕೀರ್ತಿ ಬೈಂದೂರು

ಮೊನ್ನೆ ಹೀಗೇ ಮಾತನಾಡುತ್ತಾ ಪ್ರೊಫೆಸರ್ ವಿಕ್ರಂ ರಾಜೇ ಅರಸು ಈ ವಿಷಯವನ್ನು ಹೇಳಿದರು. ಚದುರಂಗ ಅವರ ಅಣ್ಣನೊಂದಿಗೆ ರಾಜಕುಮಾರಿ ಲೀಲಾವತಿ ಅವರ ಮದುವೆಯಾಯಿತು. ಒಡೆಯರ್ ಮನೆತನದೊಂದಿಗೆ ಬಂಧ ಬೆಸೆ ಯಿತು. ಚದುರಂಗ ಅವರಿಗೂ ರಾಜ ಮನೆತನದ ಜನರೆಲ್ಲ ಸಾಕಷ್ಟು ಪ್ರೀತಿಯನ್ನು ನೀಡಿದ್ದರು. ಆದರೆ, ಆ ವೈಭವ, ವಿಲಾಸಿ ಜೀವನವನ್ನು ಬಿಟ್ಟು ತಾನು ಜನರೊಡನೆಯೇ ಬೆರೆತು ಕಲಿಯಬೇಕೆಂಬ ಬದುಕಿನ ಸಂಕಲ್ಪವಿತ್ತು. ಗುರುವಾರದ ದಿನವದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಮ್ಮನಾದ ಕಂಠೀರವ ನರಸರಾಜ ಒಡೆಯರ್ ಅವರಿಗೆ ಚದುರಂಗರು ಸಹಪಾಠಿ. ಅದಕ್ಕಿಂತ ಹೆಚ್ಚು ತೀರಾ ಆತ್ಮೀಯರು.

ಅರಮನೆಯ ಹೊರಬದುಕಿಗೆ ತನ್ನನ್ನು ತೆರೆದುಕೊಳ್ಳಬೇಕೆಂಬ ಆಸೆಗಳ ಜೊತೆಗೆ, ಮಹಾರಾಜ ಹೈಸ್ಕೂಲ್‌ಗೆ ಸೇರಿಸಿ ಎಂದು ಹೇಳಿಯೇಬಿಟ್ಟರು. ಇವರ ಖಚಿತವಾದ ನಿರ್ಧಾರವನ್ನು ಗೌರವಿಸಿ, ಕಳುಹಿಕೊಟ್ಟರು.

ಮುಂದೆ ರಾಜಮನೆತನದವರನ್ನೇ ಮದುವೆಯಾಗುವ ಸಂದರ್ಭ ಒದಗಿಬಂತು. ನಾಳೆ ಬೆಳಗಾದರೆ ಮದುವೆಯಾಗ ಬೇಕಿತ್ತು. ಮದುಮಗ ಕೂರುವ ಪಟ್ಟದ ಆನೆಯ ಸಮೇತ ಎಲ್ಲವೂ ಒಪ್ಪ ಓರಣದಿಂದ ಸಜ್ಜು ಗೊಂಡಿದ್ದ ದಿಬ್ಬಣ, ಮದುವೆ ಯಾಗಿ, ಆರಾಮದ ವಿಲಾಸಿ ಜೀವನವನ್ನು ತಮ್ಮ ತಂದೆಯ ವರು ಬದುಕಬಹುದಾಗಿದ್ದರೂ ತಾವಾಗಿಯೇ ಅದನ್ನು ಕೈಬಿಟ್ಟು, ತಮ್ಮಿಷ್ಟದಂತೆ ದೊಡ್ಡಮ್ಮಣ್ಣಿ ಅವರನ್ನೇ ಮದುವೆಯಾದರು.

ಎಲ್ಲ ಬಂಧಗಳಿಂದ ಹೊರಬಂದ ಮೇಲೆ, ಜೀವನ ಸಂದಿಗ್ಧಕ್ಕೆ ಸಿಲುಕಿತ್ತು. ಬದುಕನ್ನು ಶೂನ್ಯದಿಂದ ಮತ್ತೆ ಆರಂಭಿಸಬೇಕಿತ್ತು. ಸಂಸಾರದ ಹೊಣೆಗಾರಿಕೆಯಿದ್ದ ಕಾರಣಕ್ಕೆ ಕಲ್ಲಹಳ್ಳಿಯಲ್ಲಿ ಕೆಲ ಕಾಲ ಉಳಿದರು. ಹತ್ತು ವರ್ಷಗಳವರೆಗೆ ಒಕ್ಕಲುತನವನ್ನು ಮಾಡಿ ಬದುಕು ಕಟ್ಟಿಕೊಂಡರು. 1953ರಲ್ಲಿ ವಿಕ್ರಂ ಅವರು ಹುಟ್ಟಿದ ನಂತರ ಮೈಸೂರಿಗೆ ಬಂದರು. ಬದುಕು ಎಷ್ಟು ವಿಚಿತ್ರವೆಂದರೆ ಅಪ್ಪಾಜಿ, ಅಮ್ಮ ಎಲ್ಲಿ ದುಃಖವನ್ನು ಅನುಭವಿ ಸಿದ್ದರೋ, ಜೀವಮಾನ ಪೂರ್ತಿ ಮರೆಯಲಾರದ ಘಟನೆ ಗಳೆಲ್ಲ ಯಾವ ಊರಿನಲ್ಲಿ ನಡೆದಿತ್ತೋ, ಇದೇ ಮೈಸೂರಿಗೆ ಹಿಂದಿ ರುಗಿ ಮತ್ತೆ ಬದುಕು ಕಟ್ಟಿಕೊಂಡರು’ ಎನ್ನುತ್ತಾರೆ ವಿಕ್ರಂ ಅವರು.

ನಂತರ ‘ಕುಮಾರರಾಮ’ ಎಂಬ ನಾಟಕ, ಉಯ್ಯಾಲೆ ಕಾದಂಬರಿ ಹೀಗೆ ಬರೆವಣಿಗೆಯ ಜಗತ್ತಿಗೆ ಒಂದೊಂದೆ ಹೆಜ್ಜೆಗಳನ್ನು ಇಡಲಾರಂಭಿಸಿದರು. ಈ ನಡುವೆ ಎಲ್.ಐ.ಸಿ ಏಜೆಂಟ್ ಆಗಿಯೂ ಕೆಲಸ ಮಾಡಿದ್ದರು. 1968ರಲ್ಲಿ ತಾವೇ ಬರೆದ ‘ಸರ್ವಮಂಗಳಾ’ ಕಾದಂಬರಿ ಯನ್ನು ನಿರ್ದೇಶಿಸಿ, ಸಿನಿಮಾ ನಿರ್ಮಾಣವನ್ನೂ ಮಾಡಿದರು. ಬದುಕಿಗೆ ತಿರುವು ದೊರೆತದ್ದು ಬಹುಶಃ ಇಲ್ಲಿಂದಲೇ. ಹೆಸರು, ಪ್ರಸಿದ್ಧಿಗಳೆಲ್ಲ ಸಹಜವಾಗಿ ಇವರನ್ನರಸಿ ಬಂದವು. ಬಿಟ್ಟು ಹೋದ ಬಂಧುಗಳೆಲ್ಲ ಮತ್ತೆ ಜೊತೆಯಾದರು.

ಚದುರಂಗ ಅವರನ್ನು ಹತ್ತಿರದಿಂದ ಕಂಡ ವಿಕ್ರಂ ಅವರ ಪ್ರಕಾರ ಸಾಹಿತ್ಯದ ಪ್ರತಿಭೆಯೇ ತಂದೆಯವರ ಆಸ್ತಿ, ವಿಕ್ರಂ ಅವರ ಪತ್ನಿಯಾದ ವಿಜಯಲಕ್ಷ್ಮಿ ಅವರು ಸಾಹಿತ್ಯಕ್ಕೆ ಸಂಬಂಧಿ ಸಿದ ತಾತ್ವಿಕ ಸಂವಾದಗಳನ್ನು ಮಾವ ಚದುರಂಗ ರೊಂದಿಗೆ ನಡೆಸುತ್ತಿದ್ದ ನೆನಪುಗಳನ್ನು ನೆನೆದು ಸಂಭ್ರಮಿಸು ತ್ತಾರೆ. ಯಾವ ಸರಕಾರಿ ಕೆಲಸವಿಲ್ಲದ, ಅರಮನೆಯ ಹಂಗು ತೊರೆದ ತಂದೆಯವರು ಬಹಳಷ್ಟು ನೋವುಗಳನ್ನೇ ಕಂಡಿದ್ದರೂ ಇದೆಲ್ಲ ಬದುಕಿನ ಭಾಗವೆಂಬಂತೆ ಬದುಕಿ ಅಪ್ಪಟ ಮನುಷ್ಯ ಪ್ರೀತಿ ಯನ್ನು ಹೊಂದಿದ್ದರು. ತಂದೆ ತಾಯಿಯರ ದಾಂಪತ್ಯ ವನ್ನು ನೆನೆಯುವುದು ಬೇಂದ್ರೆಯ ಪದ್ಯದ ಸಾಲುಗಳಿಂದ:
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು’
keerthisba2018@gmail.com

Tags: