ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ದೊರೆಯದ ಉತ್ತಮ ಬೆಲೆ
ಮಂಜು ಕೋಟೆ
ಎಚ್.ಡಿ.ಕೋಟೆ : ಈ ಬಾರಿ ಬೆಳೆದ ಬೆಳೆ ಅನೇಕ ರೋಗಗಳು ಮತ್ತು ಕೀಟಬಾಧೆಗೆ ಗುರಿಯಾಗಿದ್ದು, ಅಲ್ಪಸ್ವಲ್ಪ ಬಂದ ಬೆಳೆಗೂ ಉತ್ತಮ ಬೆಲೆ ಇಲ್ಲದೆ ಸಂಕಷ್ಟದಲ್ಲಿರುವ ರೈತಾಪಿ ವರ್ಗದವರಲ್ಲಿ ಸುಗ್ಗಿಯ ಹಬ್ಬ ಸಂಕ್ರಾಂತಿ ಸಡಗರ ಗೋಚರಿಸುತ್ತಿಲ್ಲ.
ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಜಲಾಶಯ ಗಳು ಇದ್ದರೂ ಮಳೆ ಆಶ್ರಿತ ಪ್ರದೇಶವನ್ನೇ ಅವಲಂಬಿಸಿರುವ ಎಚ್. ಡಿ. ಕೋಟೆ ತಾಲ್ಲೂಕಿನ ರೈತ ಕುಟುಂಬದವರಿಗೆ ಸಂಕ್ರಾಂತಿ ಹಬ್ಬ ಪ್ರಮುಖವಾಗಿದೆ. ಪ್ರತಿ ಸಾಲಿನಲ್ಲೂ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ರೈತರು ಕುಟುಂಬ ಸಮೇತ ತಮ್ಮ ಜಮೀನುಗಳನ್ನು ಹದ ಮಾಡಿಕೊಂಡು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿ, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬೆಳೆಗಳನ್ನು ಸಂಪೂರ್ಣವಾಗಿ ಕಟಾವು ಮತ್ತು ಒಕ್ಕಣೆ ಮಾಡಿ, ಮಾರಾಟ ಮಾಡಿ, ಬಂದ ಹಣದಲ್ಲಿ ಹೊಸ ಬಟ್ಟೆ ಧರಿಸಿ, ಮನೆಗಳಿಗೆ ಹೊಸ ಪದಾರ್ಥಗಳನ್ನು ತರುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸುವುದು ವಾಡಿಕೆಯಾಗಿದೆ.
ಆದರೆ ಈ ಬಾರಿ ತಾಲ್ಲೂಕಿನ ಬಹುತೇಕ ರೈತ ಕುಟುಂಬದವರು ತಮ್ಮ ಜಮೀನುಗಳಲ್ಲಿ ಸಾಲ ಮಾಡಿ ಆರ್ಥಿಕ ಬೆಳೆಗಳಾದ ಶುಂಠಿ ಮತ್ತು ಮುಸುಕಿನ ಜೋಳ, ಭತ್ತ, ಹೊಗೆಸೊಪ್ಪು ಬೆಳೆಯನ್ನು ಬೆಳೆದರೂ ರೋಗ ಮತ್ತು ಕೀಟ ಬಾಧೆಯಿಂದ ಇಳುವರಿ ಕಡಿಮೆಯಾಗಿದೆ. ಬಂದಂತಹ ಬೆಳೆಗ ಳಿಗೂ ಬೆಲೆ ಕುಸಿತವಾಗಿದ್ದು, ಕಂಗಾಲಾಗಿದ್ದಾರೆ.
ಹಿಂಗಾರಿನಲ್ಲಿ ಬೆಳೆಯುವ ಹುರುಳಿ, ತೊಗರಿ, ರಾಗಿ ಬೆಳೆಗಳಿಗೂ ಕಳೆದ ಸಾಲಿನಲ್ಲಿ ದೊರೆತಿದ್ದ ಅರ್ಧದಷ್ಟು ಬೆಲೆಯೂ ಈ ಬಾರಿ ಇಲ್ಲದಂತಾಗಿದೆ. ಹೀಗಾಗಿ ಈ ಭಾಗದ ರೈತರಿಗೆ ಭಾರೀ ಹೊಡೆತ ಬಿದ್ದಿದೆ. ವರ್ಷವಿಡೀ ತಮ್ಮ ಜಮೀನುಗಳಲ್ಲಿ ಕುಟುಂಬ ಸಮೇತರಾಗಿ ಕಷ ಪಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿದರೂ ಒಮ್ಮೆ ಬೆಲೆ ಸಿಕ್ಕಿದರೆ, ಒಮ್ಮೆ ಬೆಳೆ ಉತ ಮವಾಗಿ ಬರುವುದಿಲ್ಲ. ಬೆಳೆ ಚೆನ್ನಾಗಿ ಬಂದರೂ ಉತ ಮ ಬೆಲೆ ಸಿಗುವುದಿಲ್ಲ. ಬೆಳೆದ ಬೆಳೆಗಳು ದಲ್ಲಾಳಿಗಳ ಹಾವಳಿಯಿಂದಾಗಿ ಸೂಕ ವಾದ ಮಾರುಕಟೆ ಸೌಲಭ್ಯವಿಲ್ಲದೆ ನಷ ವಾಗುತ್ತಿದೆ. ಈ ಹಿನೆ ಲೆಯಲ್ಲಿ ಸುಗ್ಗಿ ಹಬ್ಬವನ್ನು ಸಂಪೂರ್ಣ ಸಡಗರ ದಿಂದ ಆಚರಿಸುವುದೇ ಅಸಾಧ್ಯ ಎಂಬಂತಾಗಿದೆ.
ಹೀಗಿದ್ದರೂ ಸಂಪ್ರದಾಯದಂತೆ ರೈತ ಕುಟುಂಬಗಳವರು ಸಂಕ್ರಾಂತಿಯ ಸುಗ್ಗಿ ಹಬ್ಬವನ್ನು ತಾವು ಬೆಳೆದ ಬೆಳೆಗಳಿಗೆ ಪೂಜೆ ಸಲ್ಲಿಸಿ, ದನ-ಕರುಗಳನ್ನು ತೊಳೆದು, ಅಲಂಕರಿಸಿ ಪೂಜೆ ಮಾಡಿ ಪ್ರಸಾದವನ್ನು ನೀಡುತ್ತಾರೆ.
ರೈತರು ಸಂತಸದಿಂದ ಯಾವುದೇ ಹಬ್ಬಗಳನ್ನು ಆಚರಿಸಬೇಕಾದರೆ ಜನಪ್ರತಿನಿಽಗಳು ಮತ್ತು ಅಽಕಾರಿವರ್ಗದವರು ಕಾಳಜಿ ವಹಿಸಿ ರೈತರಿಗೆ ಸ್ಪಂದಿಸಿ, ಎಪಿಎಂಸಿ ಮಾರುಕಟ್ಟೆಯನ್ನು ಸಕ್ರಿಯ ವಾಗಿಸಿ, ರೈತರಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.





