Mysore
17
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ಇಂಬು

ವಿ. ಪಿ. ನಿರಂಜನಾರಾಧ್ಯ, ಅಭಿವೃದ್ಧಿ ಶಿಕ್ಷಣ ತಜ್ಞ
ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ಸಾಧಿಸುವತ್ತ ದಮನಿತ ಸಮುದಾಯ ಗಳಿಗೆ ನ್ಯಾಯೋಚಿತ ಅವಕಾಶ ಒದಗಿಸಬಲ್ಲ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲವರ್ಧನೆ ಗೊಳಿಸಲು ಇಂದಿನ ಬಜೆಟ್ ಮತ್ತೊಮ್ಮೆ ಭರವಸೆಯನ್ನು ಮೂಡಿಸಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಶಾಲಾ ಶಿಕ್ಷಣದ ಪಾಲಿಗೆ ಹಲವು ಒಳಿತುಗಳನ್ನು ಒಳಗೊಂಡಿದೆ.

ಮೊದಲಿಗೆ , ಈ ಬಾರಿಯ ಬಜೆಟ್ ಗಾತ್ರ ೪,೦೯,೫೪೯ ಕೋಟಿ ರೂ. ಅದರಲ್ಲಿ ಶಾಲಾ ಶಿಕ್ಷಣದ ಪಾಲು ೪೫,೨೮೬ ಕೋಟಿ. ಶೇಕಡಾವಾರು ಲೆಕ್ಕದಲ್ಲಿ ಶಿಕ್ಷಣಕ್ಕೆ ಸುಮಾರು ೧೦% ದೊರೆತಿದೆ. ಇದು ಕಳೆದ ಬಾರಿಗಿಂತ ಶೇಕಡಾ ಎರಡರಷ್ಟು ಕಡಿಮೆಯಾದರೂ, ಶಿಕ್ಷಣಕ್ಕೆ ಮೀಸಲಿಟ್ಟಿರುವ ಹಣ ಕಳೆದ ಬಾರಿಗೆ ಹೋಲಿಸಿದರೆ ೮೬೪ ಕೋಟಿ ರೂ. ಹೆಚ್ಚಳವಾಗಿದೆ.

ಪ್ರಾಥಮಿಕ ಹಾಗೂ ಪೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಮತ್ತು ಬಿಸಿಯೂಟದ ನೌಕರರರಿಗೆ ನೀಡುತ್ತಿರುವ ಗೌರವಧನವನ್ನು ಕ್ರಮವಾಗಿ ೨,೦೦೦ ಮತ್ತು ೧,೦೦೦ ರೂಗಳನ್ನು ಹೆಚ್ಚಿಸಿರುವುದು ಮಾನವೀಯತೆ ಹಾಗೂ ಶಾಲೆಗಳ ಕಾರ್ಯಕ್ಷಮತೆ ದೃಷ್ಟಿಯಿಂದ ಒಳಿತಿನ ನಡೆಯಾಗಿದೆ.

ಇದೇ ರೀತಿ ೧೦೦ ಅರ್ಹ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಮತ್ತು ಅರ್ಹ ೫೦ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸುವ ಕ್ರಮ ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ದಾಖಲಾತಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ದೊಡ್ಡ ರೀತಿಯಲ್ಲಿ ಸಹಾಯವಾಗುತ್ತದೆ.

ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ನೀಗಿಸಲು ಹೆಚ್ಚುವರಿ ತರಗತಿ ಕೋಣೆ, ಶೌಚಾಲಯ ಹಾಗೂ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ೭೨೫ ಕೋಟಿ ರೂ. ಹಾಗೂ ಅಗತ್ಯ ಪೀಠೋಪಕರಣಕ್ಕೆ ೫೦ ಕೋಟಿ ರೂ. ; ೪೬ ಕೋಟಿ ರೂ. ಅನುದಾನದ ಮೂಲಕ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಅಡಿಯಲ್ಲಿ ೧೬,೩೪೭ ಶಾಲೆಗಳಲ್ಲಿ ಆಧುನಿಕ ಅಡುಗೆ ಕೋಣೆ ಹಾಗೂ ಪಾತ್ರೆಗಳನ್ನು ಒದಗಿಸುವ ಕಾರ್ಯ; ಕಲ್ಯಾಣ ಕರ್ನಾಟಕದ ಭಾಗದಲ್ಲಿ ೨೦೦ ಕೋಟಿ ರೂ. ವೆಚ್ಚದೊಂದಿಗೆ ೫೦ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೇರಿಸುವುದು.

Tags:
error: Content is protected !!