ಜನ ಸಾಮಾನ್ಯರ ಮನಸ್ಸಿನಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ತೆರಿಗೆದಾರರಲ್ಲಿ ಆದಾಯ ತೆರಿಗೆ ಇಲಾಖೆಯ ಬಗ್ಗೆ ಒಂದು ರೀತಿಯ ಆತಂಕ, ಭಯ ಇರುತ್ತದೆ. ವಾಸ್ತವವಾಗಿ, ಆದಾಯ ತೆರಿಗೆ ಇಲಾಖೆ ತೆರಿಗೆದಾರರ ಪರವಾಗಿದ್ದು. ಸರ್ಕಾರಕ್ಕೆ ನಿಯಮಬದ್ಧವಾಗಿ ತೆರಿಗೆ ಪಾವತಿಸುವವರು ಭಯಪಡುವ ಅಗತ್ಯವಿಲ್ಲ.
ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ವಾರ್ಷಿಕ ರಿಟರ್ನ್ ಸಲ್ಲಿಸಿದ ಮೂರೇ ದಿನಗಳಲ್ಲಿ ಸಂಬಂಧಪಟ್ಟವರಿಗೆ ಪಾವತಿಯಾಗಬೇಕಾದ ತೆರಿಗೆ ಮರುಪಾವತಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಹಿಂದೆಲ್ಲಾ ತೆರಿಗೆ ಮರುಪಾವತಿ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಕೆಲವೊಮ್ಮೆ ವರ್ಷಗಳೇ ಉರುಳಿ ಹೋಗುತ್ತಿದ್ದವು. ಈಗ ಅಂತಹ ಯಾವುದೇ ಅಡೆ ತಡೆ ಇಲ್ಲದೆ ತೆರಿಗೆ ಮರು ಪಾವತಿ ರಿಟರ್ನ್ ಸಲ್ಲಿಸಿದ ಒಂದೆರಡು ದಿನಗಳಲ್ಲೇ ಬರುತ್ತಿರುವುದು ಇಲಾಖೆಯ ಕಾರ್ಯ ದಕ್ಷತೆಗೆ ಸಾಕ್ಷಿಯಾಗಿದೆ
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





