ಥೈಲ್ಯಾಂಡ್ ದೇಶದ ಪ್ರಧಾನ ಮಂತ್ರಿ ಪೇಟೊಂಗ್ಟಾರ್ನ್ ಶೈನವಾತ್ರ ಹಾಗೂ ಅವರ ಸಚಿವ ಸಂಪುಟವನ್ನು ಆ ದೇಶದ ಸಾಂವಿಧಾನಿಕ ನ್ಯಾಯಾಲಯ ವಜಾಗೊಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಾಂಬೋಡಿಯ ದೇಶದೊಂದಿಗಿನ ಗಡಿ ವಿವಾದವನ್ನು ನಿರ್ವಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಸಾಧಾರಣ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಒಂಬತ್ತು ಮಂದಿ ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠ, ಪ್ರಧಾನ ಮಂತ್ರಿ ಹುದ್ದೆಗೆ ಬೇಕಾದ ನೈತಿಕ ಮಾನದಂಡವನ್ನು ಶೈನವಾತ್ರ ಹೊಂದಿರಲಿಲ್ಲವೆಂದು ಹೇಳಿದೆ.
ಇದನ್ನು ಓದಿ: ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಸ್ಯಾಂಡಲ್‌ವುಡ್ ಹಿರಿಯ ನಟಿಯರು: ಕಾರಣ ಇಷ್ಟೇ
ಈ ಮೂಲಕ ಪ್ರಧಾನ ಮಂತ್ರಿಯಂತಹ ಉನ್ನತ ಸ್ಥಾನ ಹೊಂದಿದವರೂ ಕಾನೂನಿನ ಮುಷ್ಠಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂಬ ಸಂದೇಶ ನೀಡಿದೆ. ತನ್ಮೂಲಕ ನ್ಯಾಯಾಂಗಕ್ಕಿಂತ ದೊಡ್ಡವರು ಯಾರೂ ಇಲ್ಲವೆಂಬುದನ್ನು ಆ ದೇಶದ ನ್ಯಾಯಾಲಯ ಸ್ಪಷ್ಟಪಡಿಸಿರುವುದು ಸ್ವಾಗತಾರ್ಹ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





