ಸರ್ಕಾರ ಜನೋಪಯೋಗಿ ಸೇವೆ ಮತ್ತು ಸರಕುಗಳ ತೆರಿಗೆ ದರ ಇಳಿಸಿದರೆ, ಇಳಿಸಲು ಪ್ರಸ್ತಾಪ ಮಾಡಿದರೆ, ಕ್ರಮ ತೆಗೆದುಕೊಂಡರೆ ಚುನಾವಣೆ ಹತ್ತಿರದಲ್ಲಿದೆ ಎನ್ನುವುದು ಅಲಿಖಿತ ನಿಯಮಾವಳಿ.
ಕಳೆದ ನವೆಂಬರ್‌ನಲ್ಲಿಯೇ ಕೇಂದ್ರ ಸರ್ಕಾರ ಜಿಎಸ್‌ಟಿ ದರವನ್ನು ಇಳಿಕೆ ಮಾಡಬೇಕಿತ್ತು. ಸಾಧಕ-ಬಾಧಕಗಳ ಹೆಸರಿನಲ್ಲಿ ವಿಸ್ತೃತವಾಗಿ ಚರ್ಚಿಸಲು ಅದನ್ನು ಮುಂದೆ ಹಾಕುತ್ತಾ ಬರಲಾಗಿತ್ತು.
ಬಿಹಾರ ಚುನಾವಣೆ ಹೊತ್ತಿಗೆ ಅಕ್ಟೋಬರ್‌ನಲ್ಲಿ ಇಳಿಸಲು ನಿರ್ಧರಿಸಿದ್ದು, ಈಗ ಅಂತಹ ಕ್ರಮ ಚುನಾವಣೆ ನೀತಿ ಸಂಹಿತೆಗೆ ತೊಡಕಾಗಬಹುದೆಂದು ದಸರಾ ಹಬ್ಬಕ್ಕೇ ಈ ಕೊಡುಗೆ ನೀಡಲು ಮುಂದಾಗಿದೆ ಎನ್ನುವ ವರದಿ ಇದೆ. ಹಾಗೆಯೇ ತೈಲ ಕಂಪೆನಿ ಗಳಿಗೆ ೨೫,೦೦೦ ಕೋಟಿ ರೂ. ಸಹಾಯ ಧನ ನೀಡಲು ಮುಂದಾಗಿದ್ದು, ಅಡುಗೆ ಅನಿಲ ದರ ಕೂಡಾ ಇಳಿಯುವ ಸಾಧ್ಯತೆ ಇದೆ.
-ಎಸ್.ರಮಾನಂದ, ಬೆಂಗಳೂರು





