Mysore
30
few clouds

Social Media

ಗುರುವಾರ, 15 ಜನವರಿ 2026
Light
Dark

ಜಿಮ್ನಾಸ್ಟಿಕ್‌: ರಾಷ್ಟ್ರ ಮಟ್ಟಕ್ಕೆ ಜಿಗಿದ ಶಕ್ತಿಧಾಮದ ಮಕ್ಕಳು

ಮೈಸೂರು: ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರ ಸಾಧನೆ ಕಡಿಮೆ ಎನ್ನುವ ಮಾತುಗಳ ನಡುವೆಯೇ ನಗರದ ಶಕ್ತಿಧಾಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಧಾರವಾಡದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ನಗರದ ಶಕ್ತಿಧಾಮ ಶಾಲೆಯ ಮೂವರು ವಿದ್ಯಾರ್ಥಿನಿಯರು ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ೧೭ ವರ್ಷದೊಳಗಿನವರ ವಿಭಾಗದಲ್ಲಿ ಶಕ್ತಿಧಾಮದ ೯ನೇ ತರಗತಿಯ ಪುಟ್ಟಲಕ್ಷ್ಮಿ ಮತ್ತು ಸಿಂಚನ, ೧೪ ವರ್ಷ ದೊಳಗಿನವರ ವಿಭಾಗದಲ್ಲಿ ೮ನೇ ತರಗತಿಯ ವಿದ್ಯಾರ್ಥಿನಿ ದುರ್ಗಮ್ಮ ಅವರು ಸ್ಪಽಸಿ ಗೆಲುವು ಸಾಽಸಿದ್ದು, ಆ ಮೂಲಕ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಎದುರಾಳಿ ಆಟಗಾರರಿಗೆ ಪ್ರಬಲ ಪೈಪೋಟಿ ನೀಡುವ ಜೊತೆಗೆ ಪಾಯಿಂಟ್ಸ್‌ಗಳನ್ನು ಹೆಚ್ಚಿಸಿಕೊಂಡು ಅಂತಿಮವಾಗಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಆ ಮೂಲಕ ಛಲವೊಂದಿದ್ದರೆ ಸಾಕು ಏನು ಬೇಕಾದರೂ ಸಾಽಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಳೆದ ೭ ವರ್ಷಗಳಿಂದ ಶಕ್ತಿಧಾಮ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಬೆಂಗಳೂರಿನ ಸಿಂಚನ, ರಾಯಚೂರಿನ ದುರ್ಗಮ್ಮ, ಯಾದಗಿರಿಯ ಪುಟ್ಟಲಕ್ಷ್ಮಿ ಒಂದೂವರೆ ವರ್ಷದಿಂದ ಶಾಲೆಯಲ್ಲಿ ಜಿಮ್ನಾಸ್ಟಿಕ್ ತರಬೇತಿ ಪಡೆಯುತ್ತಿದ್ದು ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅಲ್ಪಾವಽಧಿಯ ತರಬೇತಿಯಲ್ಲಿ ಮೂವರು ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಅದರಲ್ಲಿಯೂ ಒಂದೇ ಒಂದು ಪೌಲ್ ಮಾಡದೆ ದುರ್ಗಮ್ಮ ಅವರು ಪದಕ ಜಯಿಸಿ ಹೊಸ ಸಾಧನೆ ಮಾಡಿದ್ದಾರೆ.

೧೫ ವಿದ್ಯಾರ್ಥಿನಿಯರಿಗೆ ತರಬೇತಿ ಮೈಸೂರು: ತರಬೇತುದಾರರಾದ ಮುರಳಿ ಹಾಗೂ ಮಂಜುಳಾ ಅವರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಶಾಲೆಯ ಆಯ್ದ ೧೫ ವಿದ್ಯಾರ್ಥಿನಿಯರಿಗೆ ಜಿಮ್ನಾಸ್ಟಿಕ್ ಕಲಿಸುತ್ತಿದ್ದಾರೆ. ಕ್ರೀಡೆಯ ಜೊತೆಗೆ ಓದಿನಲ್ಲಿಯೂ ಮುಂದಿರುವ ಪುಟ್ಟಲಕ್ಷಿ, ಸಿಂಚನ ಮತ್ತು ದುರ್ಗಮ್ಮ ಅವರು ಮುಂದಿನ ದಿನಗಳಲ್ಲಿ ಈ ಕ್ರೀಡೆಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಬೇಕೆಂಬ ಆಶಯ ಹೊಂದಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಪದಕ ಗೆಲ್ಲಲು ಸಿದ್ಧತೆ ಮೈಸೂರು: ಡಿಸೆಂಬರ್ ತಿಂಗಳಲ್ಲಿ ಕೊಲ್ಕತ್ತಾದಲ್ಲಿ ರಾಷ್ಟ್ರ ಮಟ್ಟದ ಜಿಮ್ನಾಸ್ಟಿಕ್ ಪಂದ್ಯಾವಳಿ ನಡೆಯಲಿದೆ. ಅಲ್ಲಿಯೂ ಪದಕ ಗಳಿಸುವ ಸವಾಲಿನೊಂದಿಗೆ ಈ ಮೂವರೂ ಕಸರತ್ತು ನಡೆಸಿದ್ದಾರೆ. ಇವರಿಗೆ ಶಕ್ತಿಧಾಮದ ಆಡಳಿತ ಮಂಡಳಿಯಿಂದ ಉತ್ತಮ ಪ್ರೋತ್ಸಾಹವೂ ದೊರೆಯುತ್ತಿದೆ. ಅಭ್ಯಾಸಕ್ಕೆ ಅವಶ್ಯವಿರುವ ಹೆಚ್ಚುವರಿ ಸಾಮಗ್ರಿಗಳನ್ನು ಒದಗಿಸಲು ಸಂಸ್ಥೆಯು ಮುಂದಾಗಿದೆ.

 

 

Tags:
error: Content is protected !!