Mysore
23
mist

Social Media

ಗುರುವಾರ, 15 ಜನವರಿ 2026
Light
Dark

ಸಂಕ್ರಾತಿ | ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ವಿಶೇಷ ಆಚರಣೆ

ಎಸ್. ಕುಮಾರ್ ಶ್ರೀರಂಗಪಟ್ಟಣ

ಮಕರ ಸಂಕ್ರಾಂತಿ ಹಬ್ಬವು ರಾಜ್ಯಾದ್ಯಂತ ಆಚರಣೆಯಾದರೂ, ಕೆಲವೆಡೆ ಮಾತ್ರ ವಿಶೇಷವಾಗಿರುತ್ತದೆ. ರೈತರು ರಾಶಿ ಪೂಜೆ, ಜಾನುವಾರುಗಳಿಗೆ ಸಿಂಗಾರ, ದನಗಳ ಕಿಚ್ಚು ಹಾಯಿಸುವುದು ಸಾಮಾನ್ಯವಾಗಿರುತ್ತದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಹೊರ ವಲಯದಲ್ಲಿರುವ ಚಂದ್ರವನ ಆಶ್ರಮದಲ್ಲಿ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಮಕರ ಸಂಕ್ರಾಂತಿ ಯಂದು ಸೂರ್ಯನ ರಶ್ಮಿಯು ಶ್ರೀ ಕಾಶಿ ಚಂದ್ರಮೌಳೇಶ್ವರ ಸ್ವಾಮಿ ಯನ್ನು ಸ್ಪರ್ಶಿಸುತ್ತದೆ. ಈ ಅಮೋಘ ದೃಶ್ಯವನ್ನು ನೂರಾರು ಜನ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.

ಅಂದು ಬೆಳಗಿನ ಜಾವದಲ್ಲಿ ಭಕ್ತರೆಲ್ಲರೂ ತಲೆಗೆ ತಿಲವನ್ನು ಹಚ್ಚಿಕೊಂಡು ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರು ಕಾಶಿ ಚಂದ್ರ ಮೌಳೇಶ್ವರಸ್ವಾಮಿಗೆ ರುದ್ರಾಭಿಷೇಕ, ಬಿಲ್ಪಾರ್ಚನೆ, ವಿಶೇಷ ಹೂ ಅಲಂಕಾರ ಮಾಡಿ ಮಹಾಮಂಗಳಾರತಿ ಯನ್ನು ನೆರವೇರಿಸುತ್ತಾರೆ. ಎಲ್ಲರಿಗೂ ಎಳ್ಳು-ಬೆಲ್ಲವನ್ನು ಪ್ರಸಾದದ ರೂಪದಲ್ಲಿ ನೀಡಲಾಗುವುದು. ಮುಖ್ಯವಾಗಿ ನವಗ್ರಹ ದೇವತೆಗಳು ನೆಲೆಸಿವೆ ಎನ್ನಲಾಗಿರುವ ಪವಿತ್ರ ಸ್ಥಳದಲ್ಲಿ ವಿಶೇಷ ಪೂಜೆಗಳು, ಅಭಿಷೇಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.

ವಿಶೇಷತೆಗಳು ?
ನವಗ್ರಹ ಪೂಜೆ : ಆಶ್ರಮವು ನವಗ್ರಹಗಳ ಪತ್ನಿಯರು ನೆಲೆಸಿರುವ ಪುಣ್ಯಕ್ಷೇತ್ರವಾಗಿದ್ದು, ಸಂಕ್ರಾಂತಿಯಂದು ವಿಶೇಷ ನವಗ್ರಹ ಪೂಜೆ ಮತ್ತು ಪತ್ನಿ ಸಮೇತ ಪೂಜೆಗಳನ್ನು ನಡೆಸಲಾಗುತ್ತದೆ.

ಧಾರ್ಮಿಕ ಕಾರ್ಯ ಕ್ರಮಗಳು : ಈ ಸಂದರ್ಭ ದಲ್ಲಿ ವಿಶೇಷ ಹೋಮ, ಹವನಗಳು, ಮತ್ತು ಧಾರ್ಮಿಕ ಉಪನ್ಯಾಸಗಳು ನಡೆಯುತ್ತವೆ.

ಸಂಕ್ರಾಂತಿ ಪರ್ವ : ಸುಗ್ಗಿಯ ಸಂಕ್ರಾಂತಿ ಸಂದರ್ಭದಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿ, ವರ್ಷದ ಸುಖ-ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ಸಾಮೂಹಿಕ ಸೇವೆ: ಭಕ್ತರು ಸಾಮೂಹಿಕವಾಗಿ ಸೇರಿ ಆಶ್ರಮದ ಅಭಿವೃದ್ಧಿಗೂ ಸಹಕಾರ ನೀಡುತ್ತಾರೆ.

 

Tags:
error: Content is protected !!