Mysore
26
scattered clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಓದುಗರ ಪತ್ರ | ನಂಜನಗೂಡು ಆದರ್ಶ ಶಾಲೆ ಬಳಿ ರಸ್ತೆ ಗುಂಡಿ ಮುಚ್ಚಿ

ಓದುಗರ ಪತ್ರ

ನಂಜನಗೂಡು – ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿ ಬಸವನಗುಡಿ ದೇವಸ್ಥಾನದಿಂದ ದೇಬೂರಿನ ತನಕ ರಸ್ತೆಯು ಹದಗೆಟ್ಟಿದೆ. ಇಲ್ಲಿನ ಆದರ್ಶ ಶಾಲೆಯ ಬಳಿ ರಸ್ತೆಯ ತುಂಬಾ ಗುಂಡಿಗಳು ಬಿದ್ದಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಸಾಗುವುದು ಅನಿವಾರ್ಯವಾಗಿದೆ.

ಈ ರಸ್ತೆಯಲ್ಲಿ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ವಾಹನ ಸವಾರರು ಆಯ ತಪ್ಪಿ ಬಿದ್ದು ಅಪಘಾತಗಳು ಸಂಭವಿಸಿವೆ. ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

-ದಿನಂತ್, ಎಂಟನೇ ತರಗತಿ, ಸರ್ಕಾರಿ ಆದರ್ಶ ಶಾಲೆ, ದೇಬೂರು, ನಂಜನಗೂಡು ತಾ

Tags:
error: Content is protected !!