Mysore
21
broken clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ಓದುಗರ ಪತ್ರ: ಭದ್ರತಾ ವ್ಯವಸ್ಥೆಯ ಲೋಪಕ್ಕೆ ಯಾರು ಹೊಣೆ?

ಓದುಗರ ಪತ್ರ

ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ ದಿಲ್ಲಿಯ ಚಾಣಕ್ಯಪುರಿಯಲ್ಲಿ ಆ.೪ರಂದು ಬೆಳಿಗ್ಗೆ ವಾಯು ವಿಹಾರ ಮಾಡುತ್ತಿದ್ದ ಸಂಸದೆ ತಮಿಳು ನಾಡಿನ ಆರ್.ಸುಧಾ ಅವರ ಸರವನ್ನು ಕಳ್ಳರು ಅಪಹರಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ರಾಜಧಾನಿ ದಿಲ್ಲಿಯಲ್ಲೇ ಜನಪ್ರತಿನಿಧಿಗಳ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದರೆ ಜನ ಸಾಮಾನ್ಯರ ಪಾಡೇನು?

ಮಹಾತ್ಮ ಗಾಂಧಿ ಹೇಳಿದಂತೆ, ಮಧ್ಯ ರಾತ್ರಿ ಯಲ್ಲಿ ಯಾವ ಆತಂಕವೂ ಇಲ್ಲದೆ ಮಹಿಳೆಯರು ಓಡಾಡುವ ಕಾಲ ಬರುವುದು ಯಾವಾಗ? ಭದ್ರತಾ ವ್ಯವಸ್ಥೆ ಆಧು ನೀಕರಣಗೊಂಡಿದ್ದರೂ ಅಪರಾಧ ಸಂಖ್ಯೆಗಳು ಹೆಚ್ಚುತ್ತಲೇ ಇವೆ. ಉದ್ಯೋಗ ಅವಕಾಶಗಳು ಹೆಚ್ಚುತ್ತಲೇ ಇದ್ದರೂ ನಿರುದ್ಯೋಗ ಸಮಸ್ಯೆಗಳು ಕಾಡುತ್ತಲೇ ಇವೆ.ಇವಕ್ಕೆ ಪರಿಹಾರವೇನು? ಸರ್ಕಾರಗಳು ಈ ಕುರಿತು ಚಿಂತಿಸುವ ಅಗತ್ಯವಿದೆ.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!