ಬೆಳಕಿನ ಹಬ್ಬ ದೀಪಾವಳಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪರಿಸರ ಸ್ನೇಹಿ‘ ಹಸಿರು ಪಟಾಕಿ’ ಗಳನ್ನು ಮಾತ್ರ ಮಾರಾಟ ಮಾಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಆದರೆ ಇದು ಕಟ್ಟು ನಿಟ್ಟಾಗಿ ಜಾರಿಗೆ ಬಂದಿದೆಯೇ ಎಂಬ ಅನುಮಾನವಿದೆ.
ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಹೋಲ್ ಸೇಲ್ ಅಂಗಡಿಗಳಿಗೆ ಪಟಾಕಿತರಲು ಹೋಗಿದ್ದಾಗ ಅಲ್ಲಿನ ಅಂಗಡಿಯವರನ್ನು ‘ಹಸಿರು ಪಟಾಕಿ’ ಕೊಡಿ ಎಂದರೆ, ಅಂಗಡಿಗಳಲ್ಲಿ ಇರುವುದೆಲ್ಲವೂ ಹಸಿರು ಪಟಾಕಿ ಗಳೇ ಎಂದು ಹೇಳಿದರು.
ಹಸಿರು ಪಟಾಕಿ ಎಂದರೆ ಪಟಾಕಿಗಳಿಗೆ ಹಸಿರು ಬಣ್ಣದ ಕಾಗದವನ್ನು ಅಂಟಿಸಿರುತ್ತಾರೆಯೇ ಹೊರತು ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ. ಹಾಗಿದ್ದರೆ ಹಸಿರು ಪಟಾಕಿಗಳು ಎಂದರೆ ಯಾವುದು? ಹಸಿರು ಪಟಾಕಿಗಳಾಗಿದ್ದರೆ ಅದಕ್ಕೆ ಬಾಕ್ಸ್ ಮೇಲೆ ಲೇಬಲ್ ಹಾಕ ಬೇಕಲ್ಲವೇ? ಸಾರ್ವಜನಿಕರಿಗೆ ಹಸಿರು ಪಟಾಕಿ ಯಾವುದು ಮಾಮೂಲಿ ಪಟಾಕಿ ಯಾವುದು ಎಂಬುದೇ ತಿಳಿಯುತ್ತಿಲ್ಲ. ಸರ್ಕಾರದ ಆದೇಶ ಕಾಗದದ ಮೇಲಷ್ಟೇ ಉಳಿಯುತ್ತದೆ, ಮಾಮೂಲಿನಂತೆ ಯಾರ ಭಯವೂ ಇಲ್ಲದೆ ಪಟಾಕಿ ವ್ಯಾಪಾರ ವಹಿವಾಟುಗಳು ಪಡೆಯುತ್ತಿವೆ, ಇದನ್ನು ನಿಯಂತ್ರಿಸುವವರು ಯಾರು ?
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ , ಮೈಸೂರು





