ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯೋಜನೆಯಡಿ ರೈತರಿಂದ ಭತ್ತ, ರಾಗಿ,ಜೋಳ ಮುಂತಾದ ಕೃಷಿ ಉತ್ಪನ್ನಗಳನ್ನು ಖರೀದಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವುದು ಶ್ಲಾಘನೀಯ. ಈ ಹಿಂದೆ ಕೃಷಿ ಮಾರಾಟ ಮಂಡಳಿ , ಕರ್ನಾಟಕ ಸಹಕಾರ ಮಾರಾಟ ಮಂಡಳಿ, ಕರ್ನಾಟಕ ಆಹಾರ ನಿಗಮಗಳನ್ನು ಖರೀದಿ ಏಜೆನ್ಸಿಗಳನ್ನಾಗಿ ನಿಯೋಜಿಸಲಾಗಿತ್ತು.
ಆದರೆ, ಈ ಬಾರಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವೇ ಮುಖ್ಯ ಏಜೆನ್ಸಿಯಾಗಿದ್ದು, ರೈತರು ಬೆಳೆದ ಬೆಳೆಗಳನ್ನು ತಾಲ್ಲೂಕು ಕೇಂದ್ರಗಳಿಗೆ ಕೊಂಡೊಯ್ದು ನೋಂದಣಿ ಮಾಡುವುದು ವಿಳಂಬವಾಗುವುದನ್ನು ತಡೆಗಟ್ಟಲು ಸ್ಥಳೀಯವಾಗಿ ಸಹಕಾರ ಸಂಘಗಳ ಮೂಲಕ ಖರೀದಿಗೆ ಕ್ರಮ ಕೈಗೊಂಡಿರುವುದು ರೈತರಿಗೆ ಅನುಕೂಲವಾಗಿದೆ.
-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ





