Mysore
16
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಓದುಗರ ಪತ್ರ: ಸರ್ಕಾರಿ ಕಚೇರಿಗಳಲ್ಲಿ ಸ್ಪಾಂಜ್ ಕಪ್ ಉಪಯೋಗಿಸಿ

ಓದುಗರ ಪತ್ರ

ನ್ಯಾಯಾಲಯದಲ್ಲಿ ಕಡತಗಳ ಪುಟಗಳನ್ನು ತಿರುಗಿಸಲು ಕೆಲವು ಸಿಬ್ಬಂದಿ ಎಂಜಲನ್ನು ಬಳಸುತ್ತಾರೆ. ಅದರಲ್ಲೂ ಪಾನ್ ಮಸಾಲ ಅಥವಾ ಎಲೆ ಅಡಕೆ ಉಪಯೋಗಿಸುವವರು ಹೀಗೆ ಮಾಡುವುದರಿಂದ ಹಾಳೆಯ ಮೇಲೆ ಕೆಂಪು ಕಲೆಗಳಾಗುತ್ತವೆ. ಇದರಿಂದ ಸೋಂಕು ಹರಡುವ ಭೀತಿಯುಂಟಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಂಡಕ್ಟರ್‌ಗಳು ಹಣ ಎಣಿಸುವ ವೇಳೆ ಎಂಜಲು ಬಳಸುವುದು ಸಾಮಾನ್ಯ ಎನ್ನುವಂತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕೂಡ ಹಾಳೆಗಳನ್ನು ತಿರುವಿ ಹಾಕಲು ಎಂಜಲು ಅದ್ದುವುದು ಮುಂದುವರಿದೇ ಇದೆ. ಇದೊಂದು ಕೆಟ್ಟ ಅಭ್ಯಾಸವಾಗಿದೆ. ಕರ್ನಾಟಕ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿ ಹಾಳೆ ತಿರುಗಿಸಲು ಎಂಜಲು ಅದ್ದುವುದನ್ನು ನಿಷೇಧಿಸಬೇಕು. ಅಗತ್ಯವಿದ್ದರೆ ಸ್ಟೇಷನರಿ ಅಂಗಡಿಗಳಲ್ಲಿ ದೊರೆಯುವ ಸ್ಪಾಂಜ್ ಕಪ್‌ಗಳನ್ನು ತಂದು ಉಪಯೋಗಿಸಬೇಕು. ಇಲ್ಲವೇ ಯಾವುದಾದರೂ ಮುಚ್ಚಳ, ಬಟ್ಟಲಿನಲ್ಲಿ ಹತ್ತಿ,/ಬಟ್ಟೆ ಇಟ್ಟುಕೊಂಡು ನೀರು ಹಾಕಿ ಸ್ಪಾಂಜ್ ರೀತಿ ಉಪಯೋಗಿಸಬಹುದು.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!