ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಘಟನೆ ಅತ್ಯಂತ ಖಂಡನೀಯ. ಇದು ದೇಶದ ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೇ ಈ ರೀತಿ ಅಪಮಾನವಾದರೆ, ಜನಸಾಮಾನ್ಯರ ಗತಿಯೇನು? ಏನೇ ಭಿನ್ನಾಭಿಪ್ರಾಯಗಳಿದ್ದರೂ ಅಸಭ್ಯತೆ, ಹಿಂಸೆ ಮತ್ತು ಅವಿವೇಕದ ನಡೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದವು.
ಸ್ವತಃ ವಕೀಲರೊಬ್ಬರು ಹೀಗೆ ನಡೆದುಕೊಂಡಿರುವುದು ವಿಪರ್ಯಾಸ. ಇಂತಹ ಹೀನ ಕೃತ್ಯಗಳು ಕಾನೂನು ಹಾಗೂ ನ್ಯಾಯಾಂಗದ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತವೆ. ಈ ವ್ಯವಸ್ಥೆ ಇಲ್ಲಿಗೆ ಬಂದು ನಿಂತಿರುವುದು ಆತಂಕಕಾರಿಯಾಗಿದೆ. ಶೂ ಎಸೆತ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇಂತಹ ಘಟನೆಗಳು ಜರುಗದಂತೆ ಕ್ರಮವಹಿಸಬೇಕಿದೆ.
-ಮುಳ್ಳೂರು ಅಕ್ಷಯ್ಕುಮಾರ್, ನಂಜನಗೂಡು ತಾ.





