ವೆನೆಜುವೆಲಾದ ಪ್ರಜಾಪ್ರಭುತ್ವ ಹೋರಾಟಗಾರ್ತಿ ಮರಿಯಾ ಕೊರಿನ ಮಚಾಡೋ ಅವರಿಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ. ಅಲ್ಲಿನ ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಡಿದ ಅವರಿಗೆ ತಕ್ಕ ಫಲ ಸಂದಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ರವರು ಈ ಗೌರವ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಭಾರತ-ಪಾಕ್, ರಷ್ಯಾ-ಉಕ್ರೇನ್, ಹಮಾಸ್-ಇಸ್ರೇಲ್ ಯುದ್ಧ ವನ್ನು ನಾನೇ ನಿಲ್ಲಿಸಿದೆ ಎಂದು ಟ್ರಂಪ್ ಬಡಾಯಿ ಕೊಚ್ಚಿ ಕೊಳ್ಳುತ್ತಿದ್ದರು.
ಪ್ರಶಸ್ತಿಗಾಗಿ ಭಾರೀ ಒತ್ತಡ ಕೂಡ ಹೇರಿದ್ದರು. ಪಾಕ್ ವಿದೇಶಾಂಗ ಸಚಿವರು ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದು ಕೂಡ ವರದಿಯಾಗಿತ್ತು. ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ದರೆ ಅದು ನೊಬೆಲ್ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದು ಬಿಡುತ್ತಿತ್ತು. ನೊಬೆಲ್ ಪ್ರತಿಷ್ಠಾನ ಅರ್ಹರಿಗೆ ಪ್ರಶಸ್ತಿ ನೀಡಿ ಪ್ರಶಸ್ತಿಯ ಘನತೆಯನ್ನು ಎತ್ತಿ ಹಿಡಿದಿದೆ.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು





