ಬೆಂಗಳೂರು ದೂರದರ್ಶನ ಕೇಂದ್ರದ ‘ಚಂದನ’ ವಾಹಿನಿಯಲ್ಲಿ ರಾತ್ರಿ ೯.೩೦ಕ್ಕೆ, ೨೩ ವರ್ಷಗಳಿಂದ ಪ್ರಸಾರವಾಗುತ್ತಿರುವ ಡಾ. ನಾ.ಸೋಮೇಶ್ವರ ಅವರು ನಡೆಸಿಕೊಡುವ ‘ ಥಟ್ ಅಂತ ಹೇಳಿ’ ಕಾರ್ಯಕ್ರಮ ಅ. ೧೩ ನೇ ತಾರೀಖಿಗೆ ೫ ಸಾವಿರ ಸಂಚಿಕೆಗಳನ್ನು ಪೂರ್ಣಗೊಳಿಸಿ ಗಿನ್ನಿಸ್ ವಿಶ್ವ ದಾಖಲೆ ಮಾಡುತ್ತಿದೆ.
ಈ ಕಾರ್ಯಕ್ರಮದ ೧೦೦ನೇ ಸಂಚಿಕೆಯಲ್ಲಿ ಡಾ.ಸುಧಾ ಮೂರ್ತಿ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮ ೨೦೧೨ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ದಾಖಲಾಗಿದೆ. ಇದುವರೆಗೆ ೨೫ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಈ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಭಾಗವಹಿ ಸಿದ್ದಾರೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಪ್ರಸಾರವಾಗಲಿ, ಸಾರ್ವಜನಿಕರಿಗೆ ದೂರದರ್ಶನ ಮತ್ತಷ್ಟು ಹತ್ತಿರವಾಗಲಿ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





