ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತಿ ಮತ್ತು ಅಖಿಲ ಭಾರತ ವಿಮಾ ನೌಕರರ ಸಂಘದ ಅಮೃತ ಮಹೋತ್ಸವದ ವರ್ಷಾಚರಣೆ ಪ್ರಯುಕ್ತ ‘ಸಂವಿಧಾನ ಒಂದು-ಜೀವಂತ ದಸ್ತಾವೇಜು’ ಕುರಿತು, ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಸ್.ನರೇಂದ್ರ ಕುಮಾರ್ ಅವರು, ಯಾವುದೇ ಅಸಮಾನತೆ ತೊಡೆಯಲು ಮಕ್ಕಳಿಗೆ ಮನೆಗಳಲ್ಲಿಯೇ ಸಂವಿಧಾನ ಕುರಿತು ತಿಳಿವಳಿಕೆ ನೀಡುವುದು ಅಗತ್ಯ ಎಂದು ಹೇಳಿರುವುದು ಶ್ಲಾಘನೀಯ.
ಸಂವಿಧಾನದ ಮೂಲಕ ದೇಶದಲ್ಲಿ ಮಾನವೀಯತೆ, ಸಮಾನತೆ ಮತ್ತು ಭ್ರಾತೃತ್ವ ಸೃಷ್ಟಿಸಲು ಸಾಧ್ಯವಾಗಿದೆ. ಸಂವಿಧಾನ ಜಾರಿಯಾದ ದಿನ ಕುವೆಂಪು ಅವರು ಸಂವಿಧಾನ ಕುರಿತು ‘ಶ್ರೀಸಾಮಾನ್ಯನಿಗೆ ದೀಕ್ಷಾ ಗೀತೆ’ ಕವಿತೆಯಲ್ಲಿ ‘ಇದು ಸರ್ವರ ಕಾಲ’ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ ಡಾ.ಎಸ್.ನರೇಂದ್ರಕುಮಾರ್ ಅವರ ಮಾತುಗಳು ಮೆಚ್ಚುವಂತಹದ್ದು.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು



