ದಸರಾ ಮಹೋತ್ಸವದ ನಿಮಿತ್ತ ಮೈಸೂರಿನ ಕೆಲ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ತೇಪೆ ಹಾಕಿದ್ದ ರಸ್ತೆಗಳಲ್ಲಿ ಈಗ ಪುನಃ ರಸ್ತೆಗಳು ಗುಂಡಿ ಬಿದ್ದಿವೆ.
ನಗರದ ಯಾದವಗಿರಿ ಜಾವಾ ರೈಲ್ವೆ ಕೆಳಸೇತುವೆ ಸೇರಿದಂತೆ ಇನ್ನಿತರ ಕೆಲವು ರಸ್ತೆಗಳು ಕೂಡ ಗುಂಡಿಮಯವಾಗಿವೆ. ಸಂಬಂಧಪಟ್ಟವರು ಇನ್ನು ಮುಂದಾದರೂ ಗುಂಡಿ ಬಿದ್ದ ರಸ್ತೆಗಳಿಗೆ ತೇಪೆ ಹಾಕುವ ಬದಲು ರಸ್ತೆಗಳಿಗೆ ಒಂದು ಲೇಯರ್ ಡಾಂಬರೀಕರಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
-ವಿಜಯ್ ಹೆಮ್ಮಿಗೆ, ಮೈಸೂರು





