ಸರ್ಕಾರವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಜಾತಿಗಳನ್ನು ಗುರ್ತಿಸುವುದರ ಮೂಲಕವೇ ನಡೆಸುತ್ತಿದೆ. ಈ ಸಮೀಕ್ಷೆಗೆ ಪ್ರಮುಖವಾಗಿ ಪಡಿತರ ಚೀಟಿಯನ್ನೇ ಮೂಲ ಆಧಾರವಾಗಿ ಬಳಸಲಾಗುತ್ತಿದೆ. ಆದರೆ ಎಪಿಎಲ್ ಕಾರ್ಡ್ ಹೊಂದಿರುವ ಬಹಳಷ್ಟು ಮಂದಿಯ ಕಾರ್ಡ್‌ಗಳು ಯಾವುದೇ ಪಡಿತರ ಪಡೆಯದಿರುವ ಕಾರಣದಿಂದ ನಿಷ್ಕ್ರಿಯವಾಗಿವೆ.
ನಿಷ್ಕ್ರಿಯವಾಗಿರುವ ಕಾರ್ಡ್ ಗಳ ಸಂಖ್ಯೆಯನ್ನು ದಾಖಲು ಮಾಡಿದಾಗ ಅಲ್ಲಿ ಕುಟುಂಬದ ಎಲ್ಲಾ ಸದಸ್ಯರ ಮಾಹಿತಿ ದೊರಕದೆ ಕೇವಲ ಕುಟುಂಬದ ಯಜಮಾನರ ಮಾಹಿತಿ ಅಷ್ಟೇ ದಾಖಲಾಗುತ್ತದೆ. ಇನ್ನುಳಿದ ಸದಸ್ಯರ ಮಾಹಿತಿಯನ್ನು ದಾಖಲಿಸಲು ಆಪ್‌ನಲ್ಲಿ ಸಮೀಕ್ಷೆದಾರರಿಗೆ ಅವಕಾಶವಿಲ್ಲದ ಕಾರಣ ಸದಸ್ಯರ ಮಾಹಿತಿ ಬಿಟ್ಟು ಹೋಗುತ್ತಿದೆ. ಆದ್ದರಿಂದ ಹಿಂದುಳಿದ ವರ್ಗಗಳ ಆಯೋಗವು ಇಂತಹ ಸಂದರ್ಭದಲ್ಲಿ ಉಳಿದ ಸದಸ್ಯರ ಮಾಹಿತಿಯನ್ನು ದಾಖಲಿಸಲು ಸಮೀಕ್ಷೆ ನಡೆಸುವವರಿಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಸಮೀಕ್ಷೆಯ ಉದ್ದೇಶವೇ ವಿಫಲವಾಗುತ್ತದೆ.
-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು





