ನಾಡಿನೆಲ್ಲೆಡೆ ಮಳೆ ಉತ್ತಮವಾಗಿ ಆಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಆದರೆ ಚಾಮರಾಜನಗರ ಜಿಲ್ಲೆ ಹರವೆ ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಮುಂಗಾರು ಮಳೆ ಆಗೊಮ್ಮೆ ಈಗೊಮ್ಮೆ ತೀರ್ಥ ಪ್ರೋಕ್ಷಣೆ ಮಾಡಿದಂತೆ ಬಂದು ಹೋಗುತ್ತಿದೆ.
ಇದರಿಂದಾಗಿ ಜಾನುವಾರುಗಳು ಮೇವಿಲ್ಲದೆ ಪರಿತಪಿಸುವಂತಾಗಿದ್ದು, ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ಗೋಶಾಲೆಗಳನ್ನಾದರೂ ತೆರೆದರೆ ಜಾನುವಾರುಗಳ ಜೀವ ಉಳಿಯುತ್ತದೆ.
– ಶೀಲಾ ಸತ್ಯೇಂದ್ರಸ್ವಾಮಿ, ಹರವೆ, ಚಾಮರಾಜನಗರ ತಾ





