ಚಿನ್ನ ಮತ್ತು ಬೆಳ್ಳಿ ದರ ಈಗ ಪ್ರತಿ ದಿನವೂ ಏರಿಕೆಯಾಗುತ್ತಲೇ ಇದೆ, ಈಗಾಗಲೇ ಚಿನ್ನ ೧೦ ಗ್ರಾಂ ಗೆ ರೂ ೧,೧೫,೦೦೦ ಮತ್ತು ಒಂದು ಕೆ.ಜಿ ಬೆಳ್ಳಿಯ ದರ ರೂ ೧,೭೦,೦೦೦ರಷ್ಟಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೬೦ ರಷ್ಟು ಹೆಚ್ಚು. ಇದು ಹೀಗೆಯೇ ಮುಂದುವರಿದರೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಚಿನ್ನ ಮತ್ತು ಬೆಳ್ಳಿ ಗಗನ ಕುಸುಮವಾಗಬಹುದು.
ಬಡ ಜನರು ಮದುವೆ ಮಾಡಲು ಚಿನ್ನದ ತಾಳಿ ಖರೀದಿ ಮಾಡುವುದು ಕಷ್ಟಕರ ವಾಗಬಹುದು, ಮುಂದೊಂದು ದಿನ ಇವೆಲ್ಲಾ ಕೇವಲ ಶ್ರೀಮಂತರ ಸೊತ್ತಾಗಬಹುದು ಇದಕ್ಕೆಲ್ಲಾ ಸರ್ಕಾರದಿಂದ ನಿಯಂತ್ರ ಸಾಧ್ಯವಿಲ್ಲವೇ?
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ , ಮೈಸೂರು





