ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಜಿ.ಎಸ್.ಟಿ. ದರವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿಯೇ ನಂದಿನಿ ತುಪ್ಪದ ದರವೂ ಕಡಿಮೆಯಾಗಿತ್ತು. ತುಪ್ಪ ಸವಿಯುವ ಕನಸಿನಲ್ಲಿದ್ದ ಗ್ರಾಹಕರಿಗೆ ಇದೀಗ ಕರ್ನಾಟಕ ಹಾಲು ಮಹಾ ಮಂಡಳ ಮತ್ತೆ ದರ ಏರಿಕೆಯ ಶಾಕ್ ನೀಡಿದೆ.
ಪ್ರತಿ ಲೀಟರ್ ನಂದಿನಿ ತುಪ್ಪಕ್ಕೆ ಇದೀಗ ೯೦ ರೂ. ಗಳನ್ನು ಹೆಚ್ಚಿಸುವ ಮೂಲಕ ಜಿ.ಎಸ್.ಟಿ. ದರ ಕಡಿತದಿಂದಾದ ವ್ಯತ್ಯಾಸವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದು, ಸರ್ಕಾರ, ಪದೇ ಪದೇ ಅಗತ್ಯ ವಸ್ತುಗಳ ದರ ಏರಿಸುತ್ತಾ ಜನರ ಜೀವನವನ್ನು ಹೈರಾಣು ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
-ವಿಜಯ್ ಹೆಮ್ಮಿಗೆ, ಮೈಸೂರು





