ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾಗಲು ಶೇ೩೩ ಅಂಕಗಳು ಸಾಕು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೀಡಿರುವ ಹೇಳಿಕೆ ವಿದ್ಯಾರ್ಥಿಗಳಲ್ಲಿ ಕಡಿಮೆ ಅಂಕ ಪಡೆದು ಪಾಸ್ ಆಗಬಹುದು ಎಂಬ ಮನೋಭಾವ ಬರುವಂತೆ ಪ್ರೇರೇಪಿಸುತ್ತದೆ. ನಿರಂತರ ಅಧ್ಯಯನಕ್ಕೆ ಮತ್ತು ಮಕ್ಕಳು ಓದಿನಲ್ಲಿ ತೊಡಗಿಸಿಕೊಳ್ಳುವುದಕ್ಕೆ ಉದಾಸೀನತೆ ಉಂಟಾಗಲು ಕಾರಣವಾಗುತ್ತದೆ.
ಹಾಗಾಗಿ ಇಂತಹ ನಿರ್ಧಾರಗಳನ್ನು ಮಕ್ಕಳ ಮಾನಸಿಕ ವಿಕಸನದ ದೃಷ್ಟಿಯಿಂದ ಮರುಪರಿಶೀಲಿಸಬೇಕು. ಅನುದಾನಿತ ಶಾಲೆಗಳಲ್ಲಿ ಒಂದರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ತರಗತಿಗಳು ಮೌಲ್ಯಯುತ ಶಿಕ್ಷಣವನ್ನು ನೀಡಲಾಗುವುದು ಎಂದು ಸಚಿವರು ಹೇಳಿರುವುದು ಸ್ವಾಗತಾರ್ಹ. ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ಹೆಚ್ಚಾಗಲಿ. ಆದರೆ ಶೇ.೩೩ಅಂಕಕ್ಕೇ ಮುಂದಿನ ತರಗತಿಗೆ ತೇರ್ಗಡೆ ಮಾಡುವುದು ಸರಿಯಾದ ಕ್ರಮವಲ್ಲ
-ಪಿ.ಸಿ. ಕಂಗಾಣಿಸೋಮು, ಕ್ಯಾತಮಾರನಹಳ್ಳಿ, ಮೈಸೂರು





