ಕನ್ನಡದ ಸಾಹಿತ್ಯ ದಿಗ್ಗಜ ಡಾ.ಎಸ್.ಎಲ್.ಭೈರಪ್ಪರವರ ಅಗಲಿಕೆಯಿಂದ ಭಾರತೀಯ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ. ಪರ್ವ, ಗೃಹಭಂಗ ಮೊದಲಾದ ಕೃತಿಗಳ ಮೂಲಕ ಅವರು ಪೌರಾಣಿಕ ಮತ್ತು ಐತಿಹಾಸಿಕ ಕಾದಂಬರಿಗಳನ್ನು ಹೊಸ ರೀತಿಯಲ್ಲಿ ರಚಿಸಿದವರು. ಭೈರಪ್ಪರಿಗೆ ಗಾಢವಾದ ಅಧ್ಯಯನವನ್ನು ಕಥನಶೈಲಿಯೊಂದಿಗೆ ಬೆರೆಸುವ ಅಪರೂಪದ ಶಕ್ತಿ ಇತ್ತು. ಅವರ ಬರಹಗಳು ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ತಲುಪಿಸುತ್ತಿದ್ದವು.
ಭಾರತೀಯ ಸಂಸ್ಕೃತಿ, ಹಿಂದೂ ತತ್ವಶಾಸ್ತ್ರ ಮತ್ತು ಮಾನವ ಸ್ವಭಾವದ ಆಳವಾದ ಅರಿವಿನಿಂದ ಅವರ ಕೃತಿಗಳು ಕಾಲಾತೀತವಾದವು. ಕನ್ನಡ ಸಾಹಿತ್ಯವಷ್ಟೇ ಅಲ್ಲ, ಭಾರತೀಯ ಚಿಂತನೆಯೇ ಒಂದು ವಿಶಿಷ್ಟ ಸ್ವರವನ್ನು ಕಳೆದುಕೊಂಡಂತಾಗಿದೆ. ಭೈರಪ್ಪರವರ ಬೌದ್ಧಿಕ ಪರಂಪರೆ ಮುಂದಿನ ಪೀಳಿಗೆಯ ಬರಹಗಾರರಿಗೂ ಚಿಂತಕರಿಗೂ ಸದಾ ಪ್ರೇರಣೆಯಾಗಿಯೇ ಉಳಿಯುತ್ತದೆ.
-ಡಾ. ಎಚ್.ಕೆ.ವಿಜಯ ಕುಮಾರ್, ಬೆಂಗಳೂರು





