Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಯುಜಿಡಿ ಪೈಪ್‌ಲೈನ್ ದುರಸ್ತಿಪಡಿಸಿ

ಓದುಗರ ಪತ್ರ

ಮೈಸೂರಿನ ವಿಜಯನಗರ ಮೊದಲನೇ ಹಂತದ, ೨ ನೇ ಕ್ರಾಸ್, ೧೦ನೇ ಮುಖ್ಯ ರಸ್ತೆಯಲ್ಲಿ ಇರುವ ಯುಜಿಡಿ ಪೈಪ್‌ಲೈನ್ ಒಡೆದು ಬಹುದಿನಗಳು ಕಳೆದಿದ್ದರೂ ಅದನ್ನು ದುರಸ್ತಿ ಮಾಡದೇ ಇರುವುದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿದು ದುರ್ವಾ ಸನೆ ಬೀರುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವವರು, ಅಕ್ಕಪಕ್ಕದ ನಿವಾಸಿಗಳ ವೇದನೆ ಹೇಳ ತೀರದಾಗಿದೆ.

ಸಮೀಪದಲ್ಲೇ ಭಾರತೀಯ ವಿದ್ಯಾ ಭವನದಶಾಲೆ ಇದ್ದು, ಆಟದ ಮೈದಾನವೂ ಇದೆ. ಈ ಯುಜಿಡಿಯಿಂದ ಬರುವ ದುರ್ವಾಸನೆ  ಯಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗುವುದರಲ್ಲಿ ಸಂಶಯವಿಲ್ಲ. ಆದಷ್ಟು ಬೇಗ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಈ ಯುಜಿಡಿ ಪೈಪ್ ಲೈನ್‌ಅನ್ನು ದುರಸ್ತಿ ಪಡಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮಕೈಗೊಳ್ಳಬೇಕು.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು

Tags:
error: Content is protected !!