ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನೇಕ ರಸ್ತೆಗಳು ತೀರಾ ಹಾಳಾಗಿದ್ದು, ವಾಹನ ಸಂಚಾರಕ್ಕೆ ಹರ ಸಾಹಸ ಪಡುವಂತಾಗಿದೆ. ರಾಮಕೃಷ್ಣನಗರದ ಇ ಮತ್ತು ಎಫ್ ಬ್ಲಾಕ್ ನಲ್ಲಿರುವ ಸಾಯಿಬಾಬಾ ದೇವಸ್ಥಾನದ ರಸ್ತೆ, ಮತ್ತು ಜಿ ಬ್ಲಾಕ್ ರಾಮಕೃಷ್ಣ ನಗರ, ಕುವೆಂಪುನಗರದ ನೃಪತುಂಗ ರಸ್ತೆ, ಕಾವೇರಿ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿರುವ ಆದಿ ಚುಂಚನಗಿರಿ ರಸ್ತೆಯೂ ಸೇರಿದಂತೆ ನಗರದ ಇನ್ನೂ ಹಲವಾರು ಭಾಗದ ರಸ್ತೆಗಳಲ್ಲಿ ಮಳೆ ಬಂದರೆ ನಡೆದಾಡಲು ಸಾಧ್ಯವಾಗುತ್ತಿಲ್ಲ.
ವಾಹನಗಳನ್ನು ಚಾಲನೆ ಮಾಡುವುದಕ್ಕೆ ಕಷ್ಟಕರವಾಗುತ್ತಿದೆ. ಆದ್ದರಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳು ಕೂಡಲೇ ಕ್ರಮ ಕೈಗೊಳ್ಳುವುದು ಅಗತ್ಯ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





