Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ದಟ್ಟಗಳ್ಳಿ ರಸ್ತೆ ದುರಸ್ತಿಪಡಿಸಿ

ಓದುಗರ ಪತ್ರ

ಮೈಸೂರು ನಗರದ ದಟ್ಟಗಳ್ಳಿ ಜೋಡಿಬೇವಿನ ಮರ ರಸ್ತೆ ಹಾಳಾಗಿದ್ದು,  ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ಬಿದ್ದು ಅಪಘಾತಕ್ಕೊಳಗಾಗಿರುವ ಘಟನೆಗಳೂ ನಡೆದಿವೆ. ಮೈಸೂರು ಪಾಲಿಕೆಯವರು ಗುಂಡಿಗಳಿಗೆ ಮಣ್ಣು ತುಂಬಿದ್ದರೂ ಮಳೆ ಬಂದಾಗ ಮಣ್ಣೆಲ್ಲಾ ಕೊಚ್ಚಿ ಹೋಗಿ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ.

ಈ ಪ್ರದೇಶವು ಶಾಸಕ ಜಿ.ಟಿ.ದೇವೇಗೌಡರು ಪ್ರತಿನಿಧಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ಶಾಸಕರು ಹಾಗೂ ಮೈಸೂರು ಪಾಲಿಕೆ ಅಧಿಕಾರಿಗಳು ರಸ್ತೆಗೆ ತೇಪೆ ಹಾಕುವ ಬದಲು ಹೊಸದಾಗಿ ಡಾಂಬರೀಕರಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಾಗಿದೆ.

 -ಎನ್.ಆರ್.ಮಲ್ಲಿಕಾರ್ಜುನ, ದಟ್ಟಗಳ್ಳಿ, ಮೈಸೂರು

Tags:
error: Content is protected !!