Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಓದುಗರ ಪತ್ರ: ರಸ್ತೆ ಬದಿಯ ಶೆಡ್‌ಗಳನ್ನು ತೆರವುಗೊಳಿಸಿ

ಮೈಸೂರಿನ ಕುವೆಂಪು ನಗರದ ಕಾಂಪ್ಲೆಕ್ಸ್ ಮುಖ್ಯ ರಸ್ತೆಯ (ಕೆಎಸ್ ಆರ್‌ಟಿಸಿ ಡಿಪೋ ರಸ್ತೆ) ಮೂರು ಕಡೆಗಳಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡುತ್ತಿರುವವರು ಮುಖ್ಯ ರಸ್ತೆಗೆ ಹೊಂದಿಕೊಂಡಂತೆಯೇ ಸುಮಾರು ೧೦ ಅಡಿಗಳ ಅಂತರದಲ್ಲಿ ವಾಚ್‌ಮ್ಯಾನ್ ಶೆಡ್ಡುಗಳನ್ನು ಕಟ್ಟಿಕೊಂಡಿದ್ದು, ಇದರಿಂದಾಗಿ ಪಾದಚಾರಿಗಳಿಗೆ ಕಿರಿಕಿರಿಯಾಗುವ ಜತೆಗೆ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ.

ಈ ಮುಖ್ಯ ರಸ್ತೆಯು ಕೆಎಸ್‌ಆರ್‌ಟಿಸಿ ಬಸ್ ಡಿಪೋಗೂ ಸಂಪರ್ಕ ಕಲ್ಪಿಸುವುದರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲದೆ ವಾಣಿಜ್ಯ ಕಾಂಪ್ಲೆಕ್ಸ್‌ಗಳು ಇರುವುದರಿಂದ ಸದಾ ಜನನಿಬಿಡ ಪ್ರದೇಶವಾಗಿರುತ್ತದೆ. ಇಂತಹ ರಸ್ತೆಯಲ್ಲಿ ಫುಟ್‌ಪಾತ್‌ಅನ್ನು ಆಕ್ರಮಿಸಿಕೊಳ್ಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇನ್ನು ಈ ರಸ್ತೆಯಲ್ಲಿ ಮಹಾನಗರ ಪಾಲಿಕೆಯ ಕೆಲ ಅಽಕಾರಿಗಳು ನಿತ್ಯ ಓಡಾಡುತ್ತಿದ್ದರೂ ಈ ಖಾಸಗಿ ಕಟ್ಟಡಗಳ ಶೆಡ್ಡುಗಳನ್ನು ಕಂಡೂ ಕಾಣದಂತಿರುವುದು ಆಶ್ಚರ್ಯಕರ. ಪಾಲಿಕೆಯವರು ಈಗಲಾದರೂ ಇತ್ತ ಗಮನಹರಿಸಿ ಈ ಶೆಡ್ಡುಗಳನ್ನು ತೆರವುಗೊಳಿಸಬೇಕಿದೆ.

– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

 

Tags: