Mysore
30
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ಓದುಗರ ಪತ್ರ: ನಂದಿನಿ ಮೊಸರಿನ ಬೆಲೆ ಇಳಿಸಿ

ಓದುಗರ ಪತ್ರ

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಲ್ಲಿ ಭಾರೀ ಬದಲಾವಣೆ ತಂದಿರುವ ಕಾರಣ ಕೆಲವು ಆಹಾರ ಪದಾರ್ಥಗಳ ಮೇಲಿನ ಬೆಲೆ ೫%ಕ್ಕೆ ಹಾಗೂ ಕೆಲವು ಶೂನ್ಯಕ್ಕೆ ಇಳಿಕೆಯಾಗಿವೆ. ಇದರಿಂದಾಗಿ ನಂದಿನಿ ಮೊಸರಿನ ಬೆಲೆ ಲೀಟರ್‌ಗೆ ೪ ರೂ. ಇಳಿಕೆಯಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹೇಳಿಕೆ ನೀಡಿದ್ದರು.

ಪ್ರಸ್ತುತ ೧೨%ಇದ್ದ ಜಿಎಸ್‌ಟಿ ಈಗ ಕಡಿಮೆಯಾಗಿದೆ. ಆದರೆ ಈಗ ಕೆಎಂಎಫ್, ಮೊಸರಿನ ಬೆಲೆ ಇಳಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು, ಗ್ರಾಹಕರನ್ನು ಸುಲಿಗೆ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರ ತೆರಿಗೆ ಇಳಿಸಿದರೂ ಕೆಎಂಎಫ್ ಮೊಸರಿನ ದರ ಇಳಿಸದೇ ಇರುವುದು ಗ್ರಾಹಕರಿಗೆ ಬೇಸರ ತರಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಮುಖ್ಯ ಮಂತ್ರಿಗಳು ಈ ಬಗ್ಗೆ ಕ್ರಮ ವಹಿಸಲಿ.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!