ಮಾಸಿಕ ೧೫,೦೦೦ ರೂ.ಸಂಬಳ ಪಡೆಯುವ ಕೆಳ ದರ್ಜೆಯ ಗುತ್ತಿಗೆ ನೌಕರನೊಬ್ಬನ ಆಸ್ತಿ ರೂ. ೧೦೦ ಕೋಟಿ . ಲೋಕಾಯುಕ್ತ ದಾಳಿ ವೇಳೆ ಹೊರಬಂದ ಈ ಅಕ್ರಮ ಸಂಪತ್ತಿನ ಪ್ರಮಾಣವನ್ನು ನೋಡಿ ಪ್ರಜ್ಞಾವಂತ ಜಗತ್ತು ದಿಗಿಲುಗೊಂಡಿದೆ.
ಡಿ ದರ್ಜೆ ನೌಕರರು ಇಷ್ಟು ಆಸ್ತಿ ಮಾಡಿರಬೇಕಾದರೆ ಇನ್ನು ಅವರ ಮೇಲಧಿಕಾರಿಗಳು ಅದೆಷ್ಟು ಆಸ್ತಿ ಮಾಡಿರಬಹುದು ಎಂಬ ಅನುಮಾನ ಮೂಡುತ್ತಿದೆ. ಸಂಬಂಧಪಟ್ಟವರು ಕೂಡಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕಾಗಿದೆ.
-ಎಸ್. ರಮಾನಂದ, ಬೆಂಗಳೂರು





