ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭ ಅಧಿಕಾರಿಗಳು ಮತ್ತು ಕೆಲವು ಜನಪ್ರತಿನಿಧಿಗಳಿಗಷ್ಟೇ ಸಿಮೀತವಾಗಿತ್ತು. ಪೊಲೀಸ್ ಬಂದೋಬಸ್ತ್ ನಡುವೆ ಸಾಮಾನ್ಯ ಜನರಿಗೆ ಅವಕಾಶ ಕಲ್ಪಿಸದೆ ಉದ್ಘಾಟನೆ ನೆರವೇರಿಸಿದ್ದು, ಸಾರ್ವಜನಿಕರಿಗೆ ಮಾಡಿದ ಅವಮಾನವೆಂದೇ ಹೇಳಬೇಕು. ಸೋಮವಾರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಭಕ್ತಾದಿಗಳನ್ನು ಕುರುಬಾರಹಳ್ಳಿಯ ಸರ್ಕಲ್ನಲ್ಲೇ ತಡೆದು, ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಮೆಟ್ಟಿಲುಗಳಿಂದ ಬೆಟ್ಟ ಹತ್ತಿಕೊಂಡು ಹೋಗಿ ದೇವಿ ದರ್ಶನ ಮಾಡಲು ಮುಂದಾಗಿದ್ದ ಭಕ್ತರಿಗೂ ಅವಕಾಶ ನೀಡದೇ ಇದ್ದುದರಿಂದ ದೂರದ ಊರಿನಿಂದ ಬಂದಿದ್ದ ಭಕ್ತರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಯಿತು. ಸಂಬಂಧಪಟ್ಟವರು ಇನ್ನು ಮುಂದಾದರೂ ದಸರಾ ಸಂಭ್ರಮದಲ್ಲಿ ಜನ ಸಾಮಾನ್ಯರನ್ನು ನಿರ್ಲಕ್ಷಿಸದಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





