ಮೈಸೂರಿನ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಅಂಗಡಿಗಳಮುಂದೆ ನಿರ್ಗತಿಕರು ಕಂಡು ಬರುತ್ತಾರೆ. ಚಳಿಗಾಲವಾಗಿರುವುದರಿಂದ ರಾತ್ರಿ ವೇಳೆ ಅವರಿಗೆ ಹೊದೆಯಲು ಹೊದಿಕೆಗಳು, ಮಲಗಲು ಸೂಕ್ತ ಜಾಗವಿಲ್ಲದೇ ಕೊರೆಯುವ ಚಳಿಯಲ್ಲಿ ಪರಿತಪಿಸುತ್ತಾರೆ. ಎಷ್ಟೋ ಬಾರಿ ಚಳಿ ತಡೆಯಲಾರದೆ ಮೃತಪಟ್ಟಿರುವ ಘಟನೆಗಳು ದಾಖಲಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಬಸ್ ನಿಲ್ದಾಣ ಮೊದಲಾದ ಕಡೆ ಆಶ್ರಯ ಪಡೆದಿರುವ ನಿರ್ಗತಿಕರಿಗೆ ಕೂಡಲೇ ಭಿಕ್ಷುಕರ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಬಿ.ಗಣೇಶ, ಕೆ.ಜಿ.ಕೊಪ್ಪಲು,ಮೈಸೂರು





